ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ವಿದ್ಯಾಮಾತಾದಲ್ಲಿ ತರಬೇತಿ ಪಡೆದು ಬರೋಬ್ಬರಿ 56 ಶಿಕ್ಷಕರು ಉತ್ತೀರ್ಣ-ಕರ್ನಾಟಕದಲ್ಲೇ ಅಗ್ರಗಣ್ಯ ಸ್ಥಾನದಲ್ಲಿ ನಿಂತ ವಿದ್ಯಾಮಾತಾ ಅಕಾಡೆಮಿ

0

ಬೆಳ್ತಂಗಡಿ: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2025ರ ಫಲಿತಾಂಶ ಬಿಡುಗಡೆಯಾಗಿದ್ದು, ತರಬೇತಿ ಪಡೆದ 56 ಅಭ್ಯರ್ಥಿಗಳು ಉತ್ತೀರ್ಣರಾಗಿ ಅರ್ಹತೆಯನ್ನು ಪಡೆದಿರುತ್ತಾರೆ, ಪ್ರಸ್ತುತ ಶಾಲೆಗಳಲ್ಲಿ ಉದ್ಯೋಗದಲ್ಲಿರುವ ಅತಿಥಿ ಶಿಕ್ಷಕರು ಹಾಗೂ ಸರಕಾರಿ ಶಿಕ್ಷಕರು ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ಪರೀಕ್ಷೆಯನ್ನು ಬರೆದಿದ್ದು, ಇಲ್ಲಿ ಶಿಕ್ಷಕರೇ ವಿದ್ಯಾರ್ಥಿಗಳಾಗಿದ್ದು ವಿಶೇಷವೆನಿಸಿದೆ. ನಿರಂತರ ಪರಿಶ್ರಮದ ಜೊತೆಗೆ ವಿದ್ಯಾಮಾತಾ ಅಕಾಡೆಮಿಯ ಮೂಲಕ ದಿನನಿತ್ಯ ಪಡೆದ, ರಾತ್ರಿ ನಿರ್ವಹಿಸುವ ಆನ್ಲೈನ್(Online) ಲೈವ್ ತರಗತಿಗಳ ಮೂಲಕ ಈ ಗಣನೀಯ ಸಾಧನೆ ಮಾಡಿದ್ದು, ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಮತ್ತು ತರಬೇತುದಾರರ ತಂಡ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಶಿಕ್ಷಕರ ಅರ್ಹತಾ ಪರೀಕ್ಷೆಯ ಮಹತ್ವ: ಈ ವರ್ಷದ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅತ್ಯಂತ ಮಹತ್ವ ಬಂದಿದ್ದು ಖಾಸಗಿ ಮತ್ತು ಸರಕಾರಿ ಸಂಸ್ಥೆಗಳಲ್ಲಿ ಅತಿಥಿ ಶಿಕ್ಷಕ/ಗೌರವ ಶಿಕ್ಷಕ/ಸರಕಾರಿ ಶಿಕ್ಷಕರಾಗಲು ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು ಅಲ್ಲದೇ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸರಕಾರಿ ಶಿಕ್ಷಕರ ನೇಮಕಾತಿಗಳಾದ GPSTR, HSTR, PSTR ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಈ ರೀತಿ ನಡೆಯುತ್ತದೆ ವಿದ್ಯಾಮಾತಾದ ತರಬೇತಿ: 2025ನೇ ಸಾಲಿನ ಅರ್ಹತಾ ಪರೀಕ್ಷೆಯ ಪೂರ್ವ ಸಿದ್ದತಾ ತರಬೇತಿಯು ರಾತ್ರಿ 7 ರಿಂದ 10ರವರೆಗೆ ನಡೆಯುವುದರ ಜೊತೆಗೆ ಪ್ರತಿನಿತ್ಯ ಅಣುಕು ಪರೀಕ್ಷೆ (Mock Test),ವಿಷಯಾಧಾರಿತ ತರಗತಿಗಳು ಅಲ್ಲದೇ ಒಂದು ದಿನದ ಮಾಹಿತಿ ವಿಶೇಷ ಮಾಹಿತಿ ಕಾರ್ಯಾಗಾರ ನಡೆದಿರುತ್ತದೆ ಅದಲ್ಲದೆ ಅಧ್ಯಯನ ಸಾಮಾಗ್ರಿ (Study Materials )ಒದಗಿಸಿ ವಿದ್ಯಾರ್ಥಿಗಳಿಗಿರುವ ಗೊಂದಲಗಳನ್ನು ನಿವಾರಿಸಿ ಪರಿಣಾಮಕಾರಿಯಾಗಿ ತರಬೇತಿ ನಡೆಸಿದ ಕೀರ್ತಿ ವಿದ್ಯಾಮಾತಾ ಅಕಾಡೆಮಿಗೆ ಸಲ್ಲುತ್ತದೆ.

2022-23 ರ ಶಿಕ್ಷಕರ ನೇಮಕಾತಿಯಲ್ಲೂ ವಿದ್ಯಾಮಾತಾ ಅಕಾಡೆಮಿ ಸಾಧನೆ: ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಅಭ್ಯರ್ಥಿಗಳು B.Ed/D.Ed ಪದವೀಧರರಾಗಿದ್ದರೂ ಸರಕಾರಿ ಶಿಕ್ಷಕರ ನೇಮಕಾತಿಗಳಲ್ಲಿ ನೇಮಕವಾಗುವ ಸಂಖ್ಯೆ ಅತೀ ವಿರಳವಾಗಿದ್ದು ಈ ನಿಟ್ಟಿನಲ್ಲಿ ಅತ್ಯುತ್ತಮ ತರಬೇತಿ ಹಾಗೂ ಜಾಗೃತಿಯ ಮೂಲಕ 2022-23ರ GPSTR/HSTR ನೇಮಕಾತಿಯಲ್ಲಿ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ 5 ವಿದ್ಯಾರ್ಥಿಗಳು ನೇಮಕವಾಗಿದ್ದು ಪ್ರತಿಷ್ಠಿತ ತರಬೇತಿ ಸಂಸ್ಥೆಯ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

KARTET 2025ರಲ್ಲಿ ಉತ್ತೀರ್ಣರಾದ ವಿದ್ಯಾಮಾತಾದ ವಿದ್ಯಾರ್ಥಿಗಳು: ಸ.ಹಿ.ಪ್ರಾ ಶಾಲೆ ಮಿತ್ತಡ್ಕ, ಮರ್ಕಂಜ ಶಾಲೆಯ ಶಿಕ್ಷಕಿ ಪ್ರತಿಮ ಕುಮಾರಿ ಕೆ.ಎಸ್., ಮಂಗಳೂರು ಕೆನರಾ ಕಾಲೇಜು ಉಪನ್ಯಾಸಕಿ ಪೂಜಾ ಭಟ್, ಮೂಡಬಿದಿರೆಯ ಎಕ್ಸಲೆಂಟ್ ಕಾಲೇಜು ಪ್ರೌಢ ಶಾಲಾ ಶಿಕ್ಷಕಿ ಪ್ರಮಿತಾ ಡಿ., ಬಂಟ್ವಾಳದ ಕೃಷ್ಣಗಿರಿ ಸ.ಹಿ.ಪ್ರಾ ಶಾಲೆಯ ಶಿಕ್ಷಕಿ ಜಯಶ್ರೀ ಎಂ., ಪುತ್ತೂರು ಸಂತ ವಿಕ್ಟರನ ಬಾಲಿಕ ಪ್ರೌಢ ಶಾಲೆಯ ಶಿಕ್ಷಕಿ ಹರಿಣಾಕ್ಷಿ ಕೆ., ಪೆರ್ಲಂಪಾಡಿ ಸ.ಹಿ.ಪ್ರಾ ಶಾಲೆಯ ಶಿಕ್ಷಕಿ ಶೈಲಜಾ ಎಸ್., ಪೆರ್ಲಂಪಾಡಿ ಸ.ಹಿ.ಪ್ರಾ ಶಾಲೆಯ ಶಿಕ್ಷಕಿ ನಮಿತಾ, ಮಲ್ನೂರು ಪಲ್ಗುಣಿ ಅನುದಾನಿತ ಶಾಲೆಯ ಶಿಕ್ಷಕಿ ಸುಜಾತ ಎಂ., ಭಗವತಿ ಸಂಕೊಳಿಗೆ ಪ್ರಾಥಮಿಕ ಶಾಲೆಯ ಶಿಕ್ಷಕಿ ಹರಿಣಾಕ್ಷಿ ಕೆ., ಉಪ್ಪಿನಂಗಡಿ ಸ.ಮಾ.ಹಿ.ಪ್ರಾ ಶಾಲೆಯ ಶಿಕ್ಷಕ ಸಂತೋಷ, ಬಲ್ನಾಡು ಸ.ಹಿ.ಪ್ರಾ ಶಾಲೆಯ ಶಿಕ್ಷಕಿ ಚಿತ್ರಲೇಖ ಕೆ., ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯ ಶಿಕ್ಷಕಿ ಅಕ್ಷತಾ ಎಚ್.ಎಲ್., ಕೊಳ್ತಿಗೆ ಸ.ಹಿ.ಪ್ರಾ ಶಾಲೆಯ ಶಿಕ್ಷಕಿ ಲತಾ ಕೆ., ಪೆರ್ಲಂಪಾಡಿ ಸ. ಪ್ರೌ ಶಾಲೆಯ ಶಿಕ್ಷಕಿ ಭವ್ಯ ಎಂ.ಸಿ., ಕುಕ್ಕೇ ಸುಬ್ರಹ್ಮಣ್ಯ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ಶಿಕ್ಷಕಿ ಮಲ್ಲಿಕಾ ಕೆ., ಪುತ್ತೂರು ಕಬಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಾಬು ಟಿ., ಪುತ್ತೂರು ಹಿರ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಿಭಾ ಬಿ.,
ಕೋಡಿಂಬಾಳ ಸ.ಹಿ.ಪ್ರಾ ಶಾಲೆಯ ಶಿಕ್ಷಕಿ ಅಶ್ವಿನಿ ಕೆ.ಕೆ., ಬೆಂಗಳೂರು ಯಶವಂತಪುರ ಸಂತೆ ಬೀದಿ ಸ.ಮಾ.ಹಿ.ಪ್ರಾ ಶಾಲೆಯ ಶಿಕ್ಷಕಿ ಪವಿತ್ರ, ಬೆಟ್ಟಂಪಾಡಿ ಸ.ಹಿ.ಪ್ರಾ ಶಾಲೆಯ ಶಿಕ್ಷಕಿ ರಶ್ಮಿ, ಸಾಮೆತಡ್ಕ ಸ.ಹಿ.ಪ್ರಾ ಶಾಲೆಯ ಮುಖ್ಯೋಪಾಧ್ಯಾಯಿನಿ ಮರಿಯಾ, ಸುಳ್ಯ ಗೂನಡ್ಕ ಸ.ಹಿ.ಪ್ರಾ ಶಾಲೆಯ ಶಿಕ್ಷಕಿ ದೇವಕಿ, ಬಳ್ಪ ಸ.ಉ.ಹಿ.ಪ್ರಾ ಶಾಲೆಯ ಶಿಕ್ಷಕಿ ಲೋಲಾಕ್ಷಿ, ಇರ್ದೆ ಬೆಟ್ಟಂಪಾಡಿ(ಗುಮ್ಮಟೆ ಗದ್ದೆ) ಸ.ಕಿ.ಪ್ರಾ ಶಾಲೆಯ ಶಿಕ್ಷಕಿ ಶೃತಿ, ಕಡಬ ಸಂಪ್ಯಾಡಿ ಸ.ಕಿ.ಪ್ರಾ ಶಾಲೆ ಶಿಕ್ಷಕಿ ಗೀತಾ, ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಮೌಂಟ್ ಕಾರ್ನಲ್ ಶಾಲೆಯ ಶಿಕ್ಷಕಿ ಕ್ಷಮಾ, ತೊಕ್ಕೊಟ್ಟು ಸಂತ ಸೆಬಾಸ್ಟಿಯನ್ ಪಿಯುಸಿ ಶಿಕ್ಷಕಿ ಪೂಜಾ, ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಶಿಕ್ಷಕಿ ಸರಿನಾ ಫಾತಿಮಾ, ಅಳ್ವಾಸ್ ಪಿ ಯು ಸಿ ಉಪನ್ಯಾಸಕಿ ಉಮಾ, ಬಂಟ್ವಾಳ ತಾಲೂಕು ಮಾಣಿಲಾ ಮೂರ್ವ ಡೆಂಬಲ ನಿವಾಸಿ ರಾಮ ನಾಯ್ಕ ರವರ ಪುತ್ರಿ ಜಯಲಕ್ಷ್ಮಿ ಡಿ., ಚಿಕ್ಕಮಗಳೂರಿನ ಜ್ಯೋತಿನಗರ ನಿವಾಸಿ ಪರಮೇಶ್ವರಪ್ಪರವರ ಪುತ್ರಿ ಪ್ರಿಯಾ ಕೆ.ಪಿ., ಸುಳ್ಯ ತಾಲೂಕು ಬೆಳ್ಳಾರೆ ಬಾಳಿಲಾ ಪಂಜಿಗಾರು ನಿವಾಸಿ ದೊಂಬಯ್ಯ ಸಾಲಿಯಾನ್ ರವರ ಪುತ್ರಿ ರಂಜಿತ ಎನ್., ಪುತ್ತೂರು ತಾಲೂಕು ಪೆರ್ಲಂಪಾಡಿ ಕೊಳ್ತಿಗೆ ಗ್ರಾಮದ ಕುಧ್ಕುಳಿ ನಿವಾಸಿ ಭರತ್ ರಾಜ್ ರವರ ಪತ್ನಿ ಅರ್ಪಿತ ಕೆ., ಪುತ್ತೂರು ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರದ ನಿವಾಸಿ ಕೆವಿನ್ ಜೋಯಲ್ ಫರ್ನಾಂಡಿಸ್ ರವರ ಪತ್ನಿ ಜೆನಿಫರ್ ಕ್ರಾಸ್ತಾ, ಸುಳ್ಯ ತಾಲೂಕು ಸಂಪಾಜೆ ಗೂನಡ್ಕ ಕಲ್ಲಗದ್ದೆ ನಿವಾಸಿ ರಂಜನ್ ರವರ ಪತ್ನಿ ಪೃಥ್ವಿ ಯು.ಆರ್., ಮರ್ದಾಳ ನೆಕ್ಕಿಲಾಡಿ ಗ್ರಾಮದ ಪೆರ್ಗಡೆಮಾರ್ ಮಾತೃಶ್ರೀ ನಿಲಯ ನಿವಾಸಿ ಹರಿಪ್ರಸಾದ್ ರವರ ಪತ್ನಿ ವನಿತ ಕುಮಾರಿ, ಸುಳ್ಯ ತಾಲೂಕು ಐವತ್ಒಕ್ಲು ಗ್ರಾಮದ ಬಂಜಿಕೋಡಿ ಸುಭಾಷ್ ರವರ ಪತ್ನಿ ಪ್ರತೀಕ್ಷ ಕೆ.ವಿ., ಪುತ್ತೂರು ತಾಲೂಕು, ಅರಿಯಡ್ಕ ಗ್ರಾಮದ ಬಳ್ಳಿಕಾನ ನಿವಾಸಿ ಕುಸುಮಾವತಿ ಬಿ., ಪುತ್ತೂರು ತಾಲೂಕು ಚಿಕ್ಕ ಮುಡ್ನೂರು ಗ್ರಾಮದ ರಾಗಿದ ಕುಮೆರು ನಿವಾಸಿ ನಿರಂಜನ್ ರವರ ಪತ್ನಿ ರಮ್ಯಶ್ರೀ ಜಿ., ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಪೆರಿಯಡ್ಕ. ದಿ/ರಾಜೇಶ್ ರವರ ಪತ್ನಿ ರಮ್ಯಾ ಬಿ., ಹುಬ್ಬಳ್ಳಿ ಅಚ್ಚವ್ವನ ಕಾಲೋನಿ ಸಾಯಿ ನಗರ ನಿವಾಸಿ ದೀಪಕ್ ಜಾಡೆಧ್ ರವರ ಪತ್ನಿ ಪ್ರತಿಮಾ ಭೀಮನಗೌಡ ನಾವಳ್ಳಿ, ಸುಳ್ಯ ತಾಲೂಕಿನ ಉಬರಡ್ಕ ಮೀತ್ತೂರು ಗ್ರಾಮದ ಮಡಿಯಾರು ನಿವಾಸಿ ರಕ್ಷಿತ್ ರವರ ಪತ್ನಿ ಕುಸುಮಾವತಿ ವಿ, ಕೆಂಜಾರು ಪೇಜಾವರ ಮಠ ಮೂಡು ಮನೆ ನಿವಾಸಿ ರಾಮದಾಸ್ ಭಟ್ ರವರ ಪುತ್ರ ಸನತ್ ಕುಮಾರ್ ಆರ್., ಪುತ್ತೂರು ತಾಲೂಕು ಬಪ್ಪಳ್ಳಿಗೆ ಆರ್. ಎಸ್. ಎಸ್ ಗ್ರೌಂಡ್ ಪೋಲಿಸ್ ಲೈನ್ ಗುರು ನಿಲಯ ನಿವಾಸಿ ಶಿವರಾಜ್ ಟಿ. ಶೆಟ್ಟಿ ರವರ ಪತ್ನಿ ವಿಶಾಲಾಕ್ಷಿ ಸಿ., ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಮಿತ್ತಳಿಕೆ ನಿವಾಸಿ ಸಂಜೀವ ಎಂ. ರವರ ಪತ್ನಿ ಅಮಿತಾ, ಬಂಟ್ವಾಳ ತಾಲೂಕು ಅನಂತಾಡಿ ಬಾಬನಕಟ್ಟೆ ನಿವಾಸಿ ಸೀತಾರಾಮ ಪೂಜಾರಿರವರ ಪತ್ನಿ ಭವ್ಯ ಎ.ವಿ., ಪಡುವೆಟ್ಟು ಮಠ ಕಸ್ತೂರಿ ನಿವಾಸದ ಬಾಬಣ್ಣ ಗೌಡ ರವರ ಪುತ್ರ ಗೌರೀಶ ಎಂ., ಸುಳ್ಯ ತಾಲೂಕು ಐವರ್ನಾಡು ಕೊಯಿಲ ನಿವಾಸಿ ಜಗದೀಶ ರವರ ಪತ್ನಿ ಅಶ್ವಿನಿ ಎನ್., ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕುಂಬ್ರ ನಿವಾಸಿ ಚೈತ್ರ ಲಕ್ಷ್ಮೀ, ಮುರುಳ್ಯ ಗ್ರಾಮದ ಮಾಲೆತ್ತಾರು ನಿವಾಸಿ ಚೆನ್ನಪ್ಪ ಗೌಡ ರವರ ಪತ್ನಿ ಪ್ರತಿಭಾ ಎನ್.ಸಿ. ಬೆಳಾಲು ಕ್ರಾಸ್ ಉಜಿರೆ ನಿವಾಸಿ ಕೃಷ್ಣ ಭಟ್ ರವರ ಪತ್ನಿ ಚೈತ್ರ ಬಾರದ್ವಾಜ್, ಹಳೆ ರಸ್ತೆ ಕ್ಯಾಂಪ್ಕೋ ಸಮೀಪ ಬೆಳ್ತಂಗಡಿ ನಿವಾಸಿ ವಿಶ್ವ ಕೆ ರವರ ಪತ್ನಿ ಪ್ರಜ್ಞಾ ಎನ್. ಕೆ., ಕಲ್ಲು ಮುಟ್ಲು ಮನೆ ಪಂಪ್ ಹೌಸ್ ಸುಳ್ಯ ನಿವಾಸಿ ಲಿಶಾಲಿನಿ ಆರ್., ಅರಕಲಗೂಡು ಕೋಟೆ ಬೀದಿ ಕೊನನೂರ್ ನಿವಾಸಿ ನವೀನ ರವರ ಪತ್ನಿ ಕವಿತಾ, ಗುತ್ತಿಗಾರು ಪೈಕ ಮನೆ ನಿವಾಸಿ ದಯಾನಂದ ಕೆ ರವರ ಪತ್ನಿ ತೇಜಸ್ವಿನಿ C,
ಸುಳ್ಯ ತಾಲೂಕು ಕುಕ್ಕಂದೂರು ಸೋಣಂಗೇರಿ ನಿವಾಸಿ ಜಗದೀಶ ರವರ ಪತ್ನಿ ಮಮತಾ ಟಿ.ವಿ. ಅವರು ವಿದ್ಯಾಮಾತಾ ಅಕಾಡೆಮಿಯು ನೀಡಿದ ನಿರಂತರ ತರಬೇತಿ ಮತ್ತು ಮಾರ್ಗದರ್ಶನದ ಫಲವಾಗಿ ಉತ್ತೀರ್ಣರಾಗಿರುತ್ತಾರೆ.

IAS, KAS ಬ್ಯಾಂಕಿಂಗ್, ರೈಲ್ವೆ, ಆರ್ಮಿ ಸೇರಿದಂತೆ ವಿವಿಧ ಸರಕಾರಿ ನೇಮಕಾತಿಗಳಿಗೆ ನಿರಂತರವಾಗಿ ತರಬೇತಿಗಳನ್ನು ನೀಡುತ್ತಿರುವ ವಿದ್ಯಾಮಾತಾ ಅಕಾಡೆಮಿಯ 275ಕ್ಕೂ ಅಧಿಕ ವಿದ್ಯಾರ್ಥಿಗಳು ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು ಇದೀಗ 2025ರ KARTET ನಲ್ಲೂ ಅವಿಸ್ಮರಣೀಯ ಸಾಧನೆ ಮಾಡಿ ಮುಂದಿನ ಉದ್ದೇಶಿತ ತರಬೇತಿಗಳಿಗೆ ಹೊಸ ಉತ್ಸಾಹ ಬಂದಿದ್ದು ಈ ನಿಟ್ಟಿನಲ್ಲಿ ವಿದ್ಯಾಮಾತಾ ಅಕಾಡೆಮಿಯ ಕಾರ್ಯ ನಿರಂತರತೆಯನ್ನು ಪಡೆದುಕೊಂಡಿದೆ. ಸದ್ಯದಲ್ಲೇ ಪ್ರಾರಂಭವಾಗಲಿರುವ HSTR/GPSTR ನೇಮಕಾತಿಗಳ ಪರೀಕ್ಷಾ ಪೂರ್ವ ಸಿದ್ದತಾ ತರಬೇತಿಗಳನ್ನು ಪಡೆದುಕೊಳ್ಳಲು ವಿದ್ಯಾಮಾತಾ ಅಕಾಡೆಮಿ ಈಗಾಗಲೇ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಿದ್ದು ಆಸಕ್ತರು 96204 68869 ಸಂಖ್ಯೆಯನ್ನು ಸಂಪರ್ಕಿಸಿ ತರಬೇತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು

LEAVE A REPLY

Please enter your comment!
Please enter your name here