ಲಾಯಿಲ: ಸಂಚಾರಿಸುತಿದ್ದ ಬೈಕ್ ಮೇಲೆ ಕಾಡುಕೋಣ ದಾಳಿ

0

ಬೆಳ್ತಂಗಡಿ: ಬೈಕ್ ನಲ್ಲಿ ಸಂಚಾರಿಸುತ್ತಿದ್ದ ವೇಳೆ ಕಾಡುಕೋಣ ದಾಳಿ ಮಾಡಿದ್ದು, ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಲಾಯಿಲ ಗ್ರಾಮದಲ್ಲಿ ಡಿ. 26ರಂದು ರಾತ್ರಿ ನಡೆದಿದೆ.

ನಡ ಗ್ರಾಮದ ಕೂಡೇಲು ನಿವಾಸಿ ವೆಂಕಪ್ಪ ಪೂಜಾರಿಯ ಮಗ ಸುಕೇಶ್(31) ಎಂಬವರು ಬೆಳ್ತಂಗಡಿ ಬೈಕ್ ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದು ಎಂದಿನಂತೆ ಕರ್ತವ್ಯ ಮುಗಿಸಿ ರಾತ್ರಿ ಸುಮಾರು 8:45ಕ್ಕೆ ಮನೆಗೆ ಹೋಗುತಿದ್ದ ವೇಳೆ ಲಾಯಿಲ ಗ್ರಾಮದ ಬೇಲಾಜೆ ಅಲೆಕ್ಕಿ ಎಂಬಲ್ಲಿ ರಸ್ತೆಯಲ್ಲಿ ಏಕಾಏಕಿ ಕಾಡುಕೋಣ ಕಾಡಿನಿಂದ ರಸ್ತೆಗೆ ದಾಟಿಕೊಂಡು ಬಂದು ಸಂಚಾರಿಸುತ್ತಿದ್ದ ಬೈಕ್ ಮೇಲೆ ದಾಳಿ ಮಾಡಿದೆ.

ಬೈಕ್ ಸವಾರ ಸುಕೇಶ್ ಅವರಿಗೆ ಕಾಲು ಮತ್ತು ಕೈಗೆ ಗಂಭೀರ ಗಾಯವಾಗಿದ್ದು, ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಾಣಪಾಯದಿಂದ ಪಾರಾಗಿದ್ದಾರೆ. ಕಾಡುಕೋಣ ದಾಳಿಗೆ ಬೈಕ್ ಗೆ ಹಾನಿಯಾಗಿದೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ ಡಿ.27ರಂದು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here