






ಬೆಳ್ತಂಗಡಿ: ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೇ ನಂಬರ್ 117ರಲ್ಲಿ ಇನ್ಫಿನಿಟಿ ಫೌಂಡೇಶನ್ ಇದರ ಜಮೀನಿನಲ್ಲಿ ಅನದಿಕೃತವಾಗಿ ನಿರ್ಮಾಣವಾಗುತ್ತಿರುವ ಕಟ್ಟಡ ಎಂಬ ಆರೋಪದ ಹಿನ್ನಲೆ ಕಾಮಗಾರಿಗೆ ಅಧಿಕಾರಿಗಳು ತಡೆಯೊಡ್ಡಿದ್ದಾರೆ. ಈ ಕುರಿತಾಗಿ ಕುವೆಟ್ಟು ಗ್ರಾ.ಪಂಚಾಯತ್ ಪ್ರಕಟಣೆ ಹೊರಡಿಸಿದ್ದು ಈ ಕೆಳಗಿನಂತಿದೆ.






ಮಾಧ್ಯಮ ಪ್ರಕಟಣೆಗಾಗಿ: ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುವೆಟ್ಟು ಗ್ರಾಮದ ಸರ್ವೇ ನಂಬರ್ 117ರಲ್ಲಿ ಇನ್ಫಿನಿಟಿ ಫೌಂಡೇಶನ್ ಇದರ ಜಮೀನಿನಲ್ಲಿ ಅನದಿಕೃತವಾಗಿ ನಿರ್ಮಿಸುತ್ತಿರುವ ಕಟ್ಟಡ ರಚನೆ ಕಾಮಗಾರಿಯನ್ನು ದಿನಾಂಕ 27/12/2025 ರಂದು ಗ್ರಾಮ ಪಂಚಾಯತ್ ಕುವೆಟ್ಟು ಪಿಡಿಒ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಂದಾಯ ಇಲಾಖೆ ಕಂದಾಯನಿರೀಕ್ಷಕರು ಇವರ ಸಹಕಾರದೊಂದಿಗೆ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾಮಗಾರಿಯನ್ನು ಬ್ಯಾನರ್ ಹಾಗೂ ನಿರ್ಬಂಧ ಟೇಪ್ ಅಳವಡಿಸಿ ಸ್ಥಗಿತಗೊಳಿಸಲಾಯಿತು.
ಪ್ರಕಟಣೆ ಗ್ರಾಮ ಪಂಚಾಯತ್









