ಬೆಳ್ತಂಗಡಿ: ಸೈಂಟ್ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚಿನಲ್ಲಿ ಕ್ರಿಸ್ಮಸ್ ಮಹೋತ್ಸವದ ಪವಿತ್ರ ಬಲಿಪೂಜೆ

0

ಬೆಲ್ತಂಗಡಿ: ಸೈಂಟ್ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚಿನಲ್ಲಿ ಕ್ರಿಸ್ಮಸ್ ಮಹೋತ್ಸವದ ಪವಿತ್ರ ಬಲಿಪೂಜೆ ಸಂಜೆ 7.00 ಗಂಟೆಗೆ ಆರಂಭವಾಯಿತು. ಎಲ್ಲಾ ಚರ್ಚುಗಳಲ್ಲಿ ಕ್ರಿಸ್ಮಸ್ ಆಚರಣೆಗಳು ಸಂಜೆ ವೇಳೆಯಲ್ಲಿ ನಡೆದವು.

ಈ ಪವಿತ್ರ ಬಲಿಪೂಜೆಯ ಮುಖ್ಯ ಅರ್ಪಣಾಧಿಕಾರಿಯಾಗಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಜೇಮ್ಸ್ ಪಾಟರಿಲ್ ಅವರು ಭಾಗವಹಿಸಿದರು. ಚಾನ್ಸೆಲರ್ ಫಾ. ಲಾರೆನ್ಸ್ ಪೂಣೋಲಿಲ್, ಫಾ. ಅಬ್ರಹಾಂ ಪಾಟರಿಲ್, ಫಾ. ಥಾಮಸ್ ಕಣ್ಣಂಕಲ್ ಭಾಗವಹಿಸಿದ್ದರು.

ಪ್ರಭು ಯೇಸು ಕ್ರಿಸ್ತನ ಜನನೋತ್ಸವವನ್ನು ಸಂಭ್ರಮ, ಪ್ರಾರ್ಥನೆ ಮತ್ತು ಸಹೋದರತ್ವದ ಮನೋಭಾವದಲ್ಲಿ ಎಲ್ಲರೂ ಒಟ್ಟಾಗಿ ಆಚರಿಸಿದರು.

LEAVE A REPLY

Please enter your comment!
Please enter your name here