






ಉಜಿರೆ: ಧರ್ಮಸ್ಥಳ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಪ್ರಭಾಕರ್ ಅವರು ನಿಧನರಾಗಿದ್ದು, ಡಿ.25ರಂದು ಸಂಜೆ 6 ಗಂಟೆಗೆ ಜೈನ ಧರ್ಮದ ವಿಧಿ ವಿಧಾನಗಳಂತೆ ಅಂತ್ಯ ಸಂಸ್ಕಾರ ನೆರವೇರಲಿದೆ. ಅವರ ಉಜಿರೆಯ ನಿವಾಸದ ಜಮೀನಿನ ವಠಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಶರೀರದ ಪ್ರೊ. ಪ್ರಭಾಕರ ಅವರ ಮಗಳು ಶರ್ಮಿಳಾ ಮತ್ತು ಅಳಿಯ ನರೇಂದ್ರ ಲಂಡನಿನಲ್ಲಿರುವುದರಿಂದ, ಆ ಹಿನ್ನೆಲೆಯಲ್ಲಿ ಡಿ.25ರಂದು ಅಂತ್ಯಸಂಸ್ಕಾರಕ್ಕೆ ಸಮಯ ನಿಗದಿ ಮಾಡಲಾಗಿದೆ. ಡಿ.24ರಂದು ಮಧ್ಯಾಹ್ನ 2 ಗಂಟೆವರೆಗೆ ಪಾರ್ಥಿವ ದರ್ಶನಕ್ಕೆ ಅವಕಾಶವಿದೆ. ನಂತರ ಎಸ್.ಡಿ.ಎಂ ಆಸ್ಪತ್ರೆಯ ಶೈತ್ಯಾಗಾರಕ್ಕೆ ರವಾನೆ ಮಾಡಲಾಗುವುದು. ಡಿ.25ರಂದು ಸಂಜೆ 5 ಗಂಟೆಯಿಂದ ಅಂತಿಮ ದರ್ಶನದ ಅವಕಾಶವಿರಲಿದೆ.


ಪ್ರೊ. ಪ್ರಭಾಕರ ಅವರ ನಿವಾಸಕ್ಕೆ ಧರ್ಮಸ್ಥಳದಿಂದ ಡಿ. ಹರ್ಷೇಂದ್ರ ಕುಮಾರ್, ಹೇಮಾವತಿ ಹೆಗ್ಗಡೆ, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಊರ ಪ್ರಮುಖರು ಬಂದಿದ್ದಾರೆ.










We miss you sir. Your personality really inspired many people