ಉಜಿರೆ: ಆದಿಗುರು ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿಗಳು ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ಭೇಟಿ

0

ಉಜಿರೆ: ಆದಿಗುರು ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದ ಒಂದು ವರ್ಷದ ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿಗಳಿಗೆ ಸಿದ್ದ ಉಡುಪು ಉದ್ಯಮ ಕ್ಷೇತ್ರದ ಬಗ್ಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ತರಬೇತಿ ಕೇಂದ್ರದ ಮಾಲಕಿ ಭವ್ಯಶ್ರೀ ಕೀರ್ತಿರಾಜ್ ಅವರ ಸಹಕಾರದಲ್ಲಿ ಡಿ. 19ರಂದು ಧರ್ಮಸ್ಥಳ ಸಿರಿ ಗ್ರಾಮದ್ಯೋಗ ಸಂಸ್ಥೆಗೆ ಭೇಟಿ ನೀಡಲಾಯಿತು.

ಸಿರಿ ಗ್ರಾಮದ್ಯೋಗ ಸಂಸ್ಥೆಯು, ಆಧುನಿಕ ಯಂತ್ರೋಪಕರಣಗಳು ಮತ್ತು ಕಾರ್ಮಿಕರ ಅರೋಗ್ಯ ಹಾಗೂ ಸುರಕ್ಷತೆಯ ಬಗ್ಗೆ ಕಾಳಜಿ ಹೊಂದಿರುವ, ಹಾಗೂ ಗ್ರಾಮೀಣ ಮಹಿಳೆಯರಿಗೆ ಅತ್ಯಧಿಕ ಉದ್ಯೋಗವಕಾಶ ನೀಡಿದ ಸುಸಜ್ಜಿತ ಗಾರ್ಮೆಂಟ್ಸ್ ಕಾರ್ಖಾನೆಯಾಗಿರುತ್ತದೆ.

ಕಾರ್ಖಾನೆಯ ಪ್ರತಿಯೊಂದು ಯಂತ್ರೋಪಕರಣ ಹಾಗೂ ಉತ್ಪಾದನೆಯ ಬಗ್ಗೆ ಸಂಸ್ಥೆಯ ಮ್ಯಾನಜಿಂಗ್ ಡೈರೆಕ್ಟರ್ ಜನಾರ್ಧನ್ ಹಾಗೂ ಜನರಲ್ ಮ್ಯಾನೇಜರ್ ಜೀವನ್ ಅವರು ಮಾಹಿತಿ ನೀಡಿದರು.

ಆದಿಗುರು ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರವು ಸತತ ಮೂರು ವರ್ಷದಿಂದ ಉಜಿರೆಯಲ್ಲಿ ಫ್ಯಾಷನ್ ಡಿಸೈನಿಂಗ್, ಎಂಬ್ರಾಯ್ ಡರಿ, ಮೆಹಂದಿ, ಆರ್ಟ್ ಮತ್ತು ಕ್ರಾಫ್ಟ್ ಮೊದಲಾದ ತರಬೇತಿಗಳನ್ನು ನೀಡುತ್ತಾ ಬಂದಿರುವ ಸಂಸ್ಥೆಯಾಗಿರುತ್ತದೆ.

LEAVE A REPLY

Please enter your comment!
Please enter your name here