ಶಿಶಿಲ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ – ನಾಗರ ಹಾವು ಕಡಿದು ಗುಡ್ಡೆತೋಟ ನಿವಾಸಿ ಪ್ರೇಮ ಸಾವು

0

ಶಿಶಿಲ: ಡಿ. 21ರಂದು ಗುಡ್ಡೆತೋಟ ನಿವಾಸಿ ಪ್ರೇಮ ( ವ. 55)ರವರು ಮದ್ಯಾಹ್ನ ದ ವೇಳೆ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ನಾಗರ ಹಾವು ಕಡಿದು ಮೃತ ಪಟ್ಟಿದ್ದಾರೆ.

ಹಾವು ಕಡಿದ ತಕ್ಷಣ ಪುತ್ತೂರು ಸರಕಾರಿ ಆಸ್ಪತ್ರೆಗೆ ಶೌರ್ಯ ವಿಪತ್ತು ತಂಡದ ಸದಸ್ಯರ ಸಹಾಯದೊಂದೊಂದಿಗೆ ಕರೆದೋಯ್ಯಲಾಯಿತಾದರೂ ವಿಷ ವಿಪರೀತ ಅವರಿಸಿರುವ ಕಾರಣ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಪ್ರೇಮ ಈಗಾಗಲೇ ತನ್ನ ಪತಿ ಶಾಂತಪ್ಪರವರನ್ನು ಕಳೆದುಕೊಂಡಿದ್ದು ಓರ್ವ ಹೆಣ್ಣು ಮಗಳು ವಿಜಯ ಹಾಗೂ ಪುತ್ರ ದಯಾನಂದ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here