






ಕಲ್ಮಂಜ: ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಮಕ್ಕಳ ಕುಣಿತ ಭಜನಾ ತಂಡ ಡಿ. 18ರಂದು ಉದ್ಘಾಟನೆಗೊಂಡಿತು. ಶ್ರೀ ಸದಾಶಿವ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಹಿರಿಯರು ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಬಾಲಚಂದ್ರ ರಾವ್ ಉದ್ಘಾಟಿಸಿ ಶುಭ ಹಾರೈಸಿದರು.



ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ತುಕಾರಾಮ ಸಾಲಿಯಾನ್ ಆರ್ಲ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ತರಬೇತುದಾರರಾದ ಸಂದೇಶ್ ಮದ್ದಡ್ಕ, ನಾಗೇಶ್ ನೆರಿಯ, ಕೃಷ್ಣ ಐತಾಲ್ ಪಂಜಿರ್ಪು, ಅರ್ಚಕ ರಾಜೇಶ್ ಹೊಳ್ಳ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸುನೀಲ್ ಕನ್ಯಾಡಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಗೌಡ, ಸದಸ್ಯರಾದ ಗಂಗಾಧರ ಗೌಡ ಕರಂಬಿತ್ತಿಲು, ಸಂತೋಷ್ ಕಡಂಬು, ಸುಂದರಿ ಪಾಲೆದಡಿ, ಕೃಷ್ಣ ಎಂ.ಕೆ., ಕುಣಿತ ಭಜನಾ ಸಂಯೋಜಕ ಯೋಗೀಶ ಹುಂಕ್ರೋಟ್ಟು, ಸಂಚಾಲಕರಾದ ಕೇಶವ ಗೌಡ ಹೊಸಮನೆ, ಪುಷ್ಪಾವತಿ ಎಳತ್ತರಡ್ಡ, ಸುಪ್ರಿತಾ ಪಜಿರಡ್ಕ, ಸಿಬ್ಬಂದಿ ಅರುಣಾ, ಭಜನಾ ತಂಡದ 40 ಕ್ಕೂ ಮಿಕ್ಕಿ ಮಕ್ಕಳು, ಪೋಷಕರು, ಭಕ್ತರು ಉಪಸ್ಥಿತರಿದ್ದರು. ರಾಧಾಕೃಷ್ಣ ಗೌಡ ವಂದಿಸಿದರು.









