






ಇಂದಬೆಟ್ಟು: ಗ್ರಾಮದ ತುರ್ಕರೆಬೆಟ್ಟು ರಾಜೇಶ್ ಬಿನ್ ಉರ್ಮಿಶ್ ರವರ ದನದ ಹಟ್ಟಿ, ಕೊಟ್ಟಿಗೆ ಹಾಗೂ ರಬ್ಬರ್ ಸ್ಮೋಕ್ ಹೌಸ್ ಗೆ ತಡ ರಾತ್ರಿ 12.30ರ ವೇಳೆಗೆ ಆಕಸ್ಮಿಕ ಬೆಂಕಿ ತಗಲಿ ಕೊಟ್ಟಿಗೆ ಸಂಪೂರ್ಣ ಸುಟ್ಟು ಹೋಗಿರುತ್ತದೆ. ಸ್ಥಳಿಯರ ತುರ್ತು ಸಹಕಾರದಿಂದ ಹಟ್ಟಿಯಲ್ಲಿ ಕಟ್ಟಿದ್ದ ದನ ಹಾಗೂ ಕರುವನ್ನು ರಕ್ಷಿಸಲಾಗಿದೆ.





ನೀರು ಹಾಕಿ ಬೆಂಕಿ ನಂದಿಸಲಾಗಿದೆ. ಯಾವುದೇ ಪ್ರಾಣ ಹಾನಿ ಆಗಿರುವುದಿಲ್ಲ. ಕೊಟ್ಟಿಗೆಯಲ್ಲಿ ಇದ್ದ ರಬ್ಬರ್ ಸೀಟ್, ಅಡಿಕೆ ಹಾಗೂ ಕೃಷಿ ಸಂಬಂಧಿತ ಉಪಕರಣಗಳು, ಮೇಲ್ಚಾವಣಿ ಸುಟ್ಟು ಹೋಗಿದೆ. ಸ್ಥಳಕ್ಕೆ ಇಂದಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ, ಸದಸ್ಯರಾದ ಶ್ರೀಕಾಂತ್ ಎಸ್., ಸುಮಿತ್ರಾ, ಕಾರ್ಯದರ್ಶಿ ಗಿರಿಯಪ್ಪ ಗೌಡ, ಕಂದಾಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.









