



ಬೆಳ್ತಂಗಡಿ: (ಪೂರ್ವ ಪ್ರಾಥಮಿಕ, ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ, ಪದವಿಪೂರ್ವ ಕಾಲೇಜು) ಉರ್ಸುಲಿನ್ ಫ್ರಾನ್ಸಿಸ್ಕನ್ ಎಜುಕೇಶನ್ ಸೊಸೈಟಿಯಿಂದ ನಡೆಸಲ್ಪಡುವ ಸಂತ ತೆರೇಸಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವವು ಡಿ.11ರಂದು ಕಾಲೇಜು ಮೈದಾನ ಜರಗಿತು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆವರೆಂಡ್ ಸೀನಿಯರ್ ಕ್ಲಾರಾ ಫ್ಲೇವಿಯಾ ಮೆನೆಜಸ್ ಪ್ರಾಂತೀಯ ಸುಪೀರಿಯರ್, ಯುಎಫ್‌ಎಸ್ ಮಂಗಳೂರು ಪ್ರಾಂತ್ಯ ಅವರು ವಹಿಸಿದರು. ಬೆಳ್ತಂಗಡಿ ಠಾಣೆಯ ಪೊಲೀಸ್ ನಿರೀಕ್ಷಕರು ಬಿ.ಜಿ. ಸುಬ್ಬಾಪುರಮಠ, ಬೆಳ್ತಂಗಡಿ ಸಹಾಯಕ ವ್ಯವಸ್ಥಾಪಕ ಎಸ್.ಬಿ.ಐ ಸ್ವಸ್ತಿಕ ಕುಲಮರ್ವ ಭಾಗವಹಿಸಿ ಶುಭಹಾರೈಸಿದರು.


ಸೇಂಟ್ ಥೆರೆಸ್ ಶಿಕ್ಷಣ ಸಂಸ್ಥೆಯ ಸಂಚಾಲಕ ಸಿ. ಥೆರೆಸಿಯಾ ಶೇರಾ, ಬೆಳ್ತಂಗಡಿ ಸಂತ ತೆರೇಸಾ ಕಾನ್ವೆಂಟ್ ಸುಪೀರಿಯರ್ ಸಿ. ಜೆಸಿಂತ ಬರೆಟ್ಟೋ, ಸಂತ ತೆರೇಸಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಿ. ಲೀನಾ ಡಿಸೋಜ, ಪಿಟಿಎ ಉಪಾಧ್ಯಕ್ಷ ಜಾನ್ ಆಲ್ವಿನ್ ಪಿಂಟೊ, ವಿದ್ಯಾರ್ಥಿ ನಾಯಕಿ ರಿಶಾಲ್ ಗೊನ್ಸಾಲ್ವಿಸ್, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಾಣಯಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಿಟಿಎ ಸದಸ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಿನ್ಸಿಪಾಲ್ ಸಿ. ಜ್ಯೋತಿ ಮೋಲಿ ಡಿಕುನ್ಹಾ ಸ್ವಾಗತಿಸಿದರು.









