





ನಾರಾವಿ: ತುಳಸಿ ಕ್ರಿಯೇಷನ್ಸ್ ತಂಡದ ಹೊಸ ಲೋಗೋ ಬಿಡುಗಡೆ ಕಾರ್ಯಕ್ರಮ ಡಿ. 14ರಂದು ಬಲ್ಯೊಟ್ಟು ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಬಿಡುಗಡೆಯಾಗಲಿದೆ.
ತಂಡದ ಹೊಸ ಲೋಗೋ ಬಿಡುಗಡೆಯನ್ನು, ಬೆಳ್ತಂಗಡಿ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ. ಪುಷ್ಪಗಿರಿ ಅವರು ನೆರವೇರಿಸಲಿದ್ದಾರೆ. ಹಾಗೂ ಕ್ಷೇತ್ರದ ದೀಪರಾಧಕರು ಸೂರಜ್ ಪೂಜಾರಿ ಬಲ್ಯೊಟ್ಟು, ಬಲ್ಯೊಟ್ಟು ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನ ಶ್ರೀ ಕ್ಷೇತ್ರದ ರತೀಶ್ ಬಲ್ಯೊಟ್ಟು, ಲೋಕೇಶ್ ಕುತ್ಲೂರು (ಸಮಾಜ ಸೇವಕರು, ಕುತ್ಲೂರು) ಮತ್ತು ತಂಡದ ಸಂಚಾಲಕರು, ಸುಜಿತ್ ಎಸ್. ನಾರಾವಿ (ಯುವ ಗಾಯಕ & ಯುವ ಸಾಹಿತಿ, ತುಳಸಿ ಕ್ರಿಯೇಷನ್ಸ್ ನಾರಾವಿ), ಹಾಗೂ ಮಹಿಳಾ ಸಂಚಾಲಕರು, ಸನ್ನಿಧಿ ಪೂಜಾರಿ ಕಾರ್ಕಳ (ಕ್ರೀಡಾಪಟು & ಕಲಾವಿದೆ, ತುಳಸಿ ಕ್ರಿಯೇಷನ್ಸ್ ನಾರಾವಿ), ಅವರು ಭಾಗವಹಿಸಲಿದ್ದಾರೆ.









