



ಬೆಳ್ತಂಗಡಿ: ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ, ಗುರುವಾಯನಕೆರೆ ಇದರ ೨೦೨೫-೨೬ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಸೋಮಯ್ಯ ಮೂಲ್ಯ ಹನೈನಡೆ ಆಯ್ಕೆಯಾಗಿದ್ದಾರೆ.


ಗೌರವಾಧ್ಯಕ್ಷರಾಗಿ ಹರೀಶ್ ಕಾರಿಂಜ, ಉಪಾಧ್ಯಕ್ಷರಾಗಿ ಲೋಕೇಶ್ ಕುಲಾಲ್ ಮತ್ತು ಪದ್ಮಕುಮಾರ್, ಕಾರ್ಯದರ್ಶಿಯಾಗಿ ಯತೀಶ್ ಸಿರಿಮಜಲು, ಜೊತೆ ಕಾರ್ಯದರ್ಶಿಯಾಗಿ ಸಂದೇಶ್ ಕುಮಾರ್ ಕಾರಂದೂರು, ಸಂಘಟನಾ ಕಾರ್ಯದರ್ಶಿಯಾಗಿ ಉಮೇಶ್ ಕುಲಾಲ್, ಕೋಶಾಧಿಕಾರಿಯಾಗಿ ವಸಂತಿ ಲಕ್ಷ್ಮಣ ಬಳ್ಳಮಂಜ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ, ಅವಿನಾಶ್ ನಮನ, ತಿಲಕ್ ರಾಜ್, ಜಗದೀಶ್ ಮಾಪಲಾಡಿ, ದಿನೇಶ್ ಕೊಂಡೆಮಾರು, ಪದ್ಮನಾಭ ಅಳದಂಗಡಿ, ಸಾಂತಪ್ಪ ಕಲಿಕ, ಹರಿಶ್ಚಂದ್ರ ಪಾಂಡೇಶ್ವರ, ದಿನೇಶ್ ಕಣಿಯೂರು, ತಾರನಾಥ ಹನೈನಡೆ, ದಿನೇಶ್ ಮಡಂತ್ಯಾರು, ಹರೀಶ್ ಮುಂಡೂರು, ಪ್ರಶಾಂತ್ ಪಾಂಡೇಶ್ವರ, ಮುಕೇಶ್ ಕುಲಾಲ್ ಬರಾಯ, ನಾಣ್ಯಪ್ಪ ಮೂಲ್ಯ ಮಾಯಿಲೋಡಿ, ಮೋಹನ ಕಂಜಿಂಜ, ಪ್ರವೀಣ ಬರಾಯ, ಬಿ.ಗಂಗಾಧರ ಸಾಲಿಯನ್ ಬರಾಯ, ಜಯಶೀಲ ಬರಾಯ, ಯಾಧವ ಮುಂಡೂರು, ಆಶಾ ಚಿದಾನಂದ, ಸದಾನಂದ ಕುಲಾಲ್ ಮತ್ತು ಹರೀಶ ಮುಂಡೂರು ಆಯ್ಕೆಯಾಗಿದ್ದಾರೆ.









