ಉಜಿರೆ: ಎಸ್.ಡಿ.ಎಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

0

ಉಜಿರೆ: ಉಜಿರೆ: ಎಸ್.ಡಿ.ಎಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ವಿದ್ಯಾರ್ಥಿಗಳ ಸಾಧನೆಯಿಂದ ಗಳಿಸಿದ ಲಾಭಕ್ಕೆ ಸಂತೋಷ ಪಡುವವರು ವಿದ್ಯಾರ್ಥಿ ಹಾಗೂ ಹೆತ್ತವರು ಆದರೆ ಫಲ ಅಪೇಕ್ಷೆ ಇಲ್ಲದೇ ಸಂತೋಷ ಪಡುವವನು ಗುರು. ಸಾಧನೆಗೆ ಸಂಕಲ್ಪ ಮಾಡಬೇಕು. ಕೆಲವೊಂದು ತ್ಯಾಗಗಳು ವಿದ್ಯಾರ್ಥಿ ದೆಸೆಯಲ್ಲಿ ಮಾಡುವುದು ಅನಿವಾರ್ಯ. ಕ್ಷಣಿಕ ಸುಖಕ್ಕೆ ಆಸೆ ಪಡದೆ ಅಮೃತದಂತಹ ಶಾಶ್ವತ ಸುಖದೆಡೆ ಸಾಗಬೇಕು.

ಟಾಮ್ ಟೆಂಷಿ, ಅರುಣಿಮಾ ಸಿನ್ಹಳಂತವರ ಬದುಕಿನ ಕಥನ ಕಷ್ಟದ ಹಾದಿಯಾಗಿದ್ದರೂ, ಎಷ್ಟು ಸಾಹಸಮಯವಾಗಿತ್ತು, ರೋಚಕವಾಗಿತ್ತು ಅದು ಅವರ ದೃಢ ಸಂಕಲ್ಪದ ಫಲವೇ ಆಗಿತ್ತು. ನಮ್ಮ ಸಾಧನೆಗೆ ಭಗವಂತನ ಅನುಗ್ರಹ ಖಂಡಿತ ಇರತ್ತೆ, ದೃಢವಾದ ಮನಃಚಿತ್ತದಿಂದ ಮುನ್ನುಗ್ಗುವ ಛಲ ನಮ್ಮಲ್ಲಿರಲಿ. ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದಂತೆ ನಾವು ಉದ್ದಾರವಾಗಲು ನಾವೇ ಪ್ರಯತ್ನಿಸಬೇಕು. ನಮ್ಮ ಸೋಲಿಗೆ ಕಣ್ಣೀರು ಹಾಕದೆ ಪರಿಹಾರ ಹುಡುಕುವೆಡೆಗೆ ಕಾರ್ಯಪ್ರವೃತರಾಗಬೇಕು.

ನಿರಂತರ ಅಭ್ಯಾಸದೊಂದಿಗೆ ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಮುಂಬರುವ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಿ, ಉತ್ತಮ ಫಲಿತಾಂಶ ದಾಖಲಿಸಿ, ಕಲಿತ ಸಂಸ್ಥೆಯ ಹೆಸರು ಉಜ್ವಲಗೊಳಿಸಿ ಯೆಂದು ನಾವೂರದ ಆರೋಗ್ಯ ಕ್ಲಿನಿಕ್ ನ ವೈದ್ಯಾಧಿಕಾರಿ ಡಾ. ಪ್ರದೀಪ್ ಮುಖ್ಯ ಅತಿಥಿಯಾಗಿ ಆಗಮಿಸಿ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ವ್ಯಕ್ತಿ ತಮ್ಮ ವೃತ್ತಿಯಲ್ಲಿ ಶ್ರದ್ದೆ ಇಟ್ಟುಕೊಂಡರೆ ಒಂದೊಂದೇ ಯಶಸ್ಸಿನ ಹೆಜ್ಜೆ ಏರಲು ಸಾಧ್ಯ, ನಮ್ಮ ವಿಚಾರಗಳು ವಾತಾವರಣವನ್ನು ಸಕಾರಾತ್ಮವಾಗಿ ಬದಲಾಯಿಸಬೇಕು. ಕಲಿಕೆ ಜೊತೆಗೆ ವಿಶೇಷವಾದ ಹವ್ಯಾಸವನ್ನು ಒಡಮೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳ ವಿಶೇಷ ಸಾಧನೆ ಇಲ್ಲಿಗೆ ನಿಲ್ಲದೆ, ಭವಿಷ್ಯದಲ್ಲೂ ಮುಂದುವರಿಯುವಂತಾಗಲಿಯೆಂದರು.

ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಮನೀಶ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನ ವಹಿಸಿದ್ದ ಗಣಕ ಶಾಸ್ತ್ರ ಉಪನ್ಯಾಸಕ ಪವಿತ್ರಕುಮಾರ್ ಉಪಸ್ಥಿತರಿದ್ದರು.

ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಸ್ಕೃತ ವಿಭಾಗದ ಮಹೇಶ್ ಎಸ್.ಎಸ್. ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here