



ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 2026ನೇ ಸಾಲಿನ ಘಟಕದ 49ನೇ ವರ್ಷದ ಅಧ್ಯಕ್ಷರಾಗಿ ತಾಲೂಕಿನ ಹೆಸರಾಂತ ನೃತ್ಯ ತಂಡ ಬೀಟ್ ರಾಕರ್ಸ್ ನ ಮಾಲಕ ಜೆಸಿ ಜಿತೇಶ್ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಜೆಸಿ ರಕ್ಷಿತ್ ಬಂಗೇರ ಅಂಡಿಂಜೆಯವರು ಕಾರ್ಯದರ್ಶಿಯಾಗಿ ಆಯ್ಕೆಗೊಂಡರು.


ಮುಂದಿನ ವರ್ಷದ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಆಯ್ಕೆಯನ್ನು ಘಟಕದ ನಿಕಟ ಪೂರ್ವಧ್ಯಕ್ಷ ಹಾಗೂ ಅಧ್ಯಕ್ಷ ಆಯ್ಕೆ ಸಮಿತಿಯ ಛೇರ್ಮನ್ ವ ಜೆಸಿ ರಂಜಿತ್ ಎಚ್. ಡಿ. ಅವರು ನೆರವೇರಿಸಿದರು. ಈ ವರ್ಷದ ಘಟಕದ ಅಧ್ಯಕ್ಷರ ಜೆಸಿ ಆಶಾಲತಾ ಪ್ರಶಾಂತ್ ಅವರು ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಹೆಸರನ್ನು ಘೋಷಿಸಿದರು. ಘಟಕದ ಪೂರ್ವಧ್ಯಕ್ಷರಾದ ಸ್ವರೂಪ್ ಶೇಖರ್, ಪ್ರಸಾದ್ ಬಿ.ಎಸ್., ಶಂಕರ್ ರಾವ್, ಚಿದಾನಂದ ಇಡ್ಯಾ, ನಾರಾಯಣ ಶೆಟ್ಟಿ, ಪ್ರಶಾಂತ್ ಲಾಯಿಲ, ಕಿರಣ್ ಕುಮಾರ್ ಶೆಟ್ಟಿ, ಸಂತೋಷ ಪಿ. ಕೋಟ್ಯಾನ್, ಶ್ರೀನಾಥ್ ಕೆ.ಎಮ್., ಕೇಶವ್ ಪೈ ಉಪಸ್ಥಿತರಿದ್ದರು.









