



ಬೆಳ್ತಂಗಡಿ: ಮದುವೆಯ ಹೆಸರಿನಲ್ಲಿ ಇಂದು ಹಲವಾರು ಅನಾಚಾರಗಳು ನಡೆಯುತ್ತಿದ್ದು, ಮದುವೆಯನ್ನು ಹೆಚ್ಚು ಭಾರಗೊಳಿಸುವುದರೊಂದಿಗೆ, ಅನಿಸ್ಲಾಮಿಕತೆಗಳಿಂದ ಮದುವೆಯ ಬರಕತ್ತನ್ನು ನೀಗಿಸಲಾಗುತ್ತಿದೆ. ಇದಕ್ಕೊಂದು ಕಡಿವಾಣ ಹಾಕಬೇಕೆಂದುಕೊಂಡು ಎಸ್.ವೈ.ಎಸ್ ಕರ್ನಾಟಕ ರಾಜ್ಯ ಸಮಿತಿಯು ‘ಮಾದರಿ ಮದುವೆ: ಶತದಿನ ಅಭಿಯಾನ’ವನ್ನು ಹಮ್ಮಿಗೊಂಡಿದ್ದು. ಆ ಪ್ರಯುಕ್ತ ಎಸ್.ವೈ.ಎಸ್ ಬೆಳ್ತಂಗಡಿ ಝೋನ್ ಜಮಾಅತ್ ಪ್ರತಿನಿಧಿಗಳ ಸಂಗಮ ಡಿ.12ರಂದು 3ಗಂಟೆಗೆ ಝೋನ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸಖಾಫಿ ಆಲಂದಿಲ ಅವರ ಅಧ್ಯಕ್ಷತೆಯಲ್ಲಿ ಗುರುವಾಯನಕೆರೆ ಮಸೀದಿ ಹಾಲ್ ನಲ್ಲಿ ನಡೆಯಲಿರುವುದು.


ಅಸ್ಸಯ್ಯದ್ ಇಸ್ಮಾಯಿಲ್ ಅಲ್ ಹಾದಿ ತಂಗಳ್ ಉಜಿರೆ ಕಾರ್ಯಕ್ರಮದ ದುಆ ನೇತೃತ್ವವನ್ನು ನೀಡಲಿದ್ದಾರೆ. ಅಸ್ಸಯ್ಯದ್ ಅಬ್ದುಲ್ ರಹ್ಮಾನ್ ಬಾ-ಅಲವಿ ಸಾದಾತ್ ತಂಗಳ್ ಕುಪ್ಪೆಟ್ಟಿ ಉದ್ಘಾಟನೆಯೊಂದಿಗೆ ಚಾಲನೆ ನೀಡಲಿದ್ದಾರೆ. ಮತ್ತು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ MSM ಅಬ್ದುಲ್ ರಶೀದ್ ಝ್ಯೆನಿ ಕಾಮಿಲ್ ಸಖಾಫಿ ಮಾದರಿ ಮದುವೆ ಬಗ್ಗೆ ವಿಷಯ ಮಂಡಿಸಲಿದ್ದಾರೆ.
ಬೆಳ್ತಂಗಡಿ ಝೋನ್ ವ್ಯಾಪ್ತಿಯ 60 ಮೊಹಲ್ಲಾಗಳಿಂದ ಖತೀಬರು, ಜಮಾಅತ್ ಪ್ರತಿನಿದಿಗಳು ಸೇರಿ ಸುಮಾರು 350ರಷ್ಟು ನಾಯಕರು ಭಾಗವಹಿಸಲಿದ್ದಾರೆ. ಎಂದು ಝೋನ್ ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








