ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಸಿ.ಎ. ವೃತ್ತಿಪರ ಶಿಕ್ಷಣದ ಅವಕಾಶಗಳ ಬಗ್ಗೆ ಕಾರ್ಯಾಗಾರ

0

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿ ಆತಿಥ್ಯದಲ್ಲಿ The Institute of Chartered Accountants of India (ICAI) ಇದರ Committee on Career Counselling ವತಿಯಿಂದ CAFY & Super Mega Career Counselling Programme (CAFY 4.0) ನ.27ರಂದು ಕಾಲೇಜಿನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಅಖಿಲ ಭಾರತ ಮಟ್ಟದ CA ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಿ ಸಿ.ಎ ಆಕಾಶದೀಪ್ ಪೈ (Counsellor) ಹಾಗೂ ಸಿ.ಎ ನಿತಿನ್ ಬಾಳಿಗ (SICASA Chairman, Mangaluru Branch of SIRC of ICAI) ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಸಿಎ ವೃತ್ತಿಪರ ಶಿಕ್ಷಣದ ಅವಕಾಶಗಳು, ಪರೀಕ್ಷಾ ಹಂತಗಳು ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಇರುವ ಭವಿಷ್ಯದ ಸಾಧ್ಯತೆಗಳ ಕುರಿತು ಪ್ರೇರಣಾದಾಯಕ ಉಪನ್ಯಾಸ ನೀಡಿದರು. ಸಿಎ ಆಗಬೇಕೆಂಬ ಕನಸಿನ ಜೊತೆಗೆ ನಿರಂತರ ಪ್ರಯತ್ನ ಮತ್ತು ಅಧ್ಯಯನ ಶೀಲತೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕೆಂದು ಸಿಎ ಆಕಾಶದೀಪ ಪೈ ಕರೆ ನೀಡಿದರು.

ಕಾರ್ಯಕ್ರಮವನ್ನು ವಾಣಿ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಎಚ್. ಪದ್ಮಗೌಡ ಅವರು ಉದ್ಘಾಟನೆ ಮಾಡಿ, ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸ್ಪಷ್ಟಗೊಳಿಸಿಕೊಂಡು ಭವಿಷ್ಯ ನಿರ್ಮಾಣದಲ್ಲಿ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಅವರು, ವಾಣಿಜ್ಯ ವಿಭಾಗದ ಮುಖ್ಯಸ್ಥ ಶಂಕರ್ ರಾವ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here