




ಬೆಳಾಲು: ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿಯಿಂದ ತಾವು ಸಲ್ಲಿಸಿದ ಅಪರೂಪದ ಭೂಮಿಯ ಡೋಪ್ಕ ಎಂ. ಟೈಪ್ ಬೇರಿಯಂ, ಹೆಕ್ಷಾ ಫೆರೈಟ್ ರಚನಾತ್ಮಕ ಕಾಂತಿಯ ಡೈ ಎಲೆಕ್ಟ್ರಿಕ್ ಮತ್ತು ಮಲ್ಟಿ ಫೇರಾಯ್ಕ ಗುಣ ಲಕ್ಷಣಗಳ ವಿಷಯದ ತತ್ವ ಶಾಸ್ತ್ರದಲ್ಲಿ ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ಪ್ರೊಪೆಸರರ್ ನಿಷ್ಕಲಾ ಕೆ. ಆರ್. ಅವರಿಗೆ ಡಾಕ್ಟರೇಟ್ ಲಭಿಸಿದೆ. ಬೆಳಾಲು ಕುದ್ರಾಲು ಅನ್ವೇಷ್ ಕೆ. ಅವರ ಪತ್ನಿ, ಧರ್ಮಸ್ಥಳದ ರಾಮಚಂದ್ರ ರಾವ್ ಮತ್ತು ಶೋಭಾ ದಂಪತಿಯ ಪುತ್ರಿ.


ಉಜಿರೆ ಶ್ರೀ ಧ. ಮ. ಕಾಲೇಜು ಹಳೆ ವಿದ್ಯಾರ್ಥಿನಿ ಮಣಿಪಾಲ ತಂತ್ರಜ್ಞಾನ ಸಂಸ್ಥೆಯ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾದ್ಯಾಪಕಿ ಡಾ. ಮಮತಾ ಡಿ. ದೈವಜ್ಞ ಅವರು ಮಾರ್ಗದರ್ಶನ ನೀಡಿದ್ದರು.









