




ಬೆಳ್ತಂಗಡಿ: ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡಿದ ಘಟನೆಗೆ ಸಂಬಂಧಿಸಿ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದು ಪಡಿಸಿ ತೀರ್ಪು ನೀಡಿದೆ.


ಘಟನೆಯ ವಿವರ: 2023ರ ಡಿಸೆಂಬರ್ 8ರಂದು 10.15ರ ವೇಳೆಗೆ ಕರಿಮಣೀಲು ಗ್ರಾಮದ ವೇಣೂರು ಚರ್ಚ್ ಬಳಿಯ ಮೂಡಬಿದ್ರೆ-ವೇಣೂರು ಸಾರ್ವಜನಿಕ ರಸ್ತೆಯಲ್ಲಿ ಎಸ್.ಐ. ಶ್ರೀಶೈಲ ಮತ್ತು ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮೂಡಬಿದ್ರೆ ಕಡೆಯಿಂದ ರಂಗೇಗೌಡ ಎ.ಆರ್ ಎಂಬವರು ಪಿಕಪ್ ವಾಹನ(ಕೆ.ಎ.13. ಸಿ. 4395)ದಲ್ಲಿ ಎರಡು ಜರ್ಸಿ ದನಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ವೇಣೂರು ಠಾಣಾ ಎಸ್ಐ ಶ್ರೀಶೈಲ ಅವರು ಆರೋಪಿ ವಿರುದ್ಧ ಬೆಳ್ತಂಗಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಬಳಿಕ ಈ ಪ್ರಕರಣವನ್ನು ರದ್ದುಗೊಳಿಸುವಂತೆ ಆರೋಪಿ ರಂಗೇಗೌಡ ಎ.ಆರ್. ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಮೊಹಮ್ಮದ್ ನವಾಝ್ ಅವರು ಪ್ರಕರಣ ರದ್ದು ಪಡಿಸಿ ಆದೇಶ ಹೊರಡಿಸಿದ್ದಾರೆ. ಅರ್ಜಿದಾರರ ವರೆ ವಕೀಲರಾದ ಮಾರುತಿ ಕನ್ನಯ್ಯ ನಾಯಕ್, ದೇವಾನಂದ ಕೆ. ಪ್ರಸಾದ್ ಕುಮಾರ್ ರೈ ಮತ್ತು ವೆಂಕಟೇಶ್ ಪದ್ಮುಂಜ ವಾದಿಸಿದ್ದರು.









