




ಬೆಳ್ತಂಗಡಿ: ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ನ. 24ರಂದು ನಡೆದ ಅಂತರ್ ಶಾಲಾ ವಿಜ್ಞಾನ ಮಾದರಿ ತಯಾರಿಕೆಯಲ್ಲಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಪ್ರಶಸ್ತಿಗಳನ್ನು ಗಳಿಸಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.
- ಮರ್ವಿನ್ ಡಿಸೋಜ (10ನೇ ) ಮತ್ತು ಸುಧನ್ವ (10ನೇ) ಫ್ಲಾಶ್ ಫನ್ ನಲ್ಲಿ (Flash Fun) ದ್ವಿತೀಯ ಸ್ಥಾನ.
- ಅನ್ಸನ್ ಲೋಬೊ (10ನೇ ) ಮತ್ತು ವಿಯಾನ್ ಫೆರ್ನಾಂಡಿಸ್ (10ನೇ) ವಿಜ್ಞಾನ ಮಾದರಿ ತಯಾರಿಕೆಯಲ್ಲಿ ದ್ವಿತೀಯ ಸ್ಥಾನ.


ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಕಿ ಪ್ರೀತಾ ಡಿಸೋಜಾರವರು ತರಬೇತಿಯನ್ನು ನೀಡಿರುತ್ತಾರೆ. ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕ ಗುರು ವೋಲ್ಟರ್ ಡಿಮೆಲ್ಲೋರವರು ಹಾಗೂ ಶಾಲಾ ಮುಖ್ಯೋಪಾಧ್ಯಾಯ ಗುರು ಕ್ಲಿಫರ್ಡ್ ಪಿಂಟೋರವರು ಅಭಿನಂದಿಸಿದರು.









