




ಧರ್ಮಸ್ಥಳ: ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಹುಟ್ಟುಹಬ್ಬದ ದಿನವಾದ ನ.25ರಂದು ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ತಂಡದ ಸದಸ್ಯರು ಭೇಟಿ ನೀಡಿ ಶುಭಾಶಯ ತಿಳಿಸಿದರು. ಡಿ. ಹರ್ಷೇಂದ್ರ ಕುಮಾರ್ ಅವರನ್ನು ಭೇಟಿ ಮಾಡಿ ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ತಂಡದ ಸದಸ್ಯರು ನಡೆಸುತ್ತಿರುವ ಸಾಮಾಜಿಕ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.




ಡಿ. ಹರ್ಷೇಂದ್ರ ಕುಮಾರ್ ಅವರು ಇನ್ನೂ ಹೆಚ್ಚಿನ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವoತೆ ಪ್ರೆರೇಪಿಸಿದರು ಎಂದು ಕ್ರಿಶ್ಚಿಯನ್ ಬ್ರದರ್ಸ್ ತಂಡದ ಅಧ್ಯಕ್ಷ ಅಗಸ್ಟೀನ್ ತಿಳಿಸಿದ್ದಾರೆ. ಸಂಘದ ಗೌರವಾಧ್ಯಕ್ಷ ಸೆಬಾಸ್ಟಿಯನ್ ಪಿ.ಟಿ., ಕಾರ್ಯದರ್ಶಿ ಶಿಜೋ ಜೋಸೆಫ್, ಮಾಜಿ ಉಪಾಧ್ಯಕ್ಷ ಶಾಜಿ ತೋಮಸ್, ಮಾಜಿ ಕಾರ್ಯದರ್ಶಿ ತೋಮಸ್, ಸಂಘದ ಸದಸ್ಯರಾದ ಶೆರ್ಲಿ ಉಪಸ್ಥಿತರಿದ್ದರು.









