




ಧರ್ಮಸ್ಥಳ: ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಆಶ್ರಯದಲ್ಲಿ ಯುವಬಿಲ್ಲವ ವೇದಿಕೆ ಬಿಲ್ಲವ ಮಹಿಳಾ ವೇದಿಕೆ ಸಹಕಾರದೊಂದಿಗೆ ಡಿ. 7ರಂದು ನಡೆಯಲಿರುವ ಕೋಟಿ ಚೆನ್ನಯ ಕ್ರೀಡಾಕೂಟ 2025ರ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಸಮಾಲೋಚನಾ ಸಭೆ ಧರ್ಮಸ್ಥಳ ಗ್ರಾಮದಲ್ಲಿ ಇತ್ತೀಚೆಗೆ ನಡೆಯಿತು.


ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಅವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ತಾಲೂಕು ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, ಜೊತೆ ಕಾರ್ಯದರ್ಶಿ ಸಂತೋಷ್ ಉಪ್ಪಾರ್, ಯುವ ಬಿಲ್ಲವ ವೇದಿಕೆ ಕ್ರೀಡಾ ಕಾರ್ಯದರ್ಶಿ ದೇವಿಪ್ರಸಾದ್, ಧರ್ಮಸ್ಥಳ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರೀತಮ್ ಡಿ., ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ ಪರಮೇಶ್ವರ್, ಧರ್ಮಸ್ಥಳ ಗ್ರಾಮ ಸಮಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ, ಎಸ್.ಎನ್.ಡಿ.ಪಿ ಉಪಾಧ್ಯಕ್ಷ ಸಚಿನ್ ಇಂಚರ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಪಂಚಾಯತ್ ಸದಸ್ಯೆ ಸುನಿತಾ ಶ್ರೀಧರ್ ಪೂಜಾರಿ, ಶ್ರೀ ನಾರಾಯಣ ಗುರು ಗ್ರಾಮ ಸಮಿತಿ ಗೌರವ ಅಧ್ಯಕ್ಷ ಪುರುಷೋತ್ತಮ್ ಪೂಜಾರಿ ಮೂಡಂಗಲ್, ಕಾರ್ಯದರ್ಶಿ ಯಶೋಧರ ಪೂಜಾರಿ, ಉಪಾಧ್ಯಕ್ಷ ಶ್ರೀಧರ್ ಪೂಜಾರಿ, ಪ್ರಭಾಕರ್ ಪೂಜಾರಿ ಧರ್ಮಸ್ಥಳ, ವೇದ ಪ್ರಭಾಕರ, ಸದಾಶಿವ ಕಾಮದೇನು, ರಘು ದೊಂಡೋಲೆ, ವಸಂತ ಸುವರ್ಣ, ಶ್ರೀ ಗುರುದೇವ ಸಂಘ ಜೋಡುಸ್ಥಾನ ಸದಸ್ಯರು ಮತ್ತು ಧರ್ಮಸ್ಥಳ ಗ್ರಾಮ ಸಮಿತಿ ಪದಾಧಿಕಾರಿಗಳು ಹಾಗು SNDP ಧರ್ಮಸ್ಥಳ ಸದಸ್ಯರು ಉಪಸ್ಥಿತರಿದ್ದರು. ತಾಲೂಕು ಸಂಘದ ನಿರ್ದೇಶಕ ರೂಪೇಶ್ ಧರ್ಮಸ್ಥಳ ಸ್ವಾಗತಿಸಿದರು. ಸೂರ್ಯ ಪ್ರಕಾಶ್ ದೊಂಡೋಲೆ ಕಾರ್ಯಕ್ರಮ ನಿರೂಪಿಸಿದರು.









