




ಬಳಂಜ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಬಳಂಜ ಹಳೆ ವಿದ್ಯಾರ್ಥಿ ಸಂಘ, ಬಳಂಜ ಶಿಕ್ಷಣ ಟ್ರಸ್ಟ್, ಬಳಂಜ ಅಮೃತ ಮಹೋತ್ಸವ ಸಮಿತಿ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಗ್ರಾಮ ಪಂಚಾಯತ್ ಬಳಂಜ, ಶಿವಾಜಿ ಫ್ರೆಂಡ್ಸ್ ಕ್ಲಬ್ ನೇತಾಜಿ ನಗರ ಬಳಂಜ ಇವರ ಸಹಕಾರದೊಂದಿಗೆ ಬಳಂಜ ಶಾಲಾ ಕ್ರೀಡಾಂಗಣ ನವೀಕರಣ, ಬಯಲು ರಂಗ ಮಂದಿರ ನಿರ್ಮಾಣ ಮತ್ತು ಎಲ್.ಕೆ.ಜಿ., ಯು.ಕೆ.ಜಿ. ಶಾಲಾ ಕೊಠಡಿ ನವೀಕರಣ 21 ಲಕ್ಷ ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮವು ನ. 24 ರಂದು ನಡೆಯಿತು.
ಕಾಮಗಾರಿಗೆ ಬಳಂಜ ಶಿವಾಜಿ ಫ್ರೆಂಡ್ಸ್ ಕ್ಲಬ್ ನಿಂದ 1ಲಕ್ಷ, ಧರ್ಮಸ್ಥಳ ಬಿ.ಸಿ. ಟ್ರಸ್ಟ್ ನಿಂದ 15 ಲಕ್ಷ, ಹಾಗೂ ಶಾಸಕರ ನೀಡಿಯಿಂದ 5 ಲಕ್ಷ ಒಟ್ಟು 21 ಲಕ್ಷದ ಕಾಮಗಾರಿಗೆ ಚಾಲನೆ ನೀಡಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಎಲ್.ಕೆ.ಜಿ ಮಕ್ಕಳೊಂದಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಊರಿನ ಶಾಲೆ ಮತ್ತು ದೇವಸ್ಥಾನ ಜೀರ್ಣೋದ್ಧಾರಗೊಂಡು ಅಭಿವೃದ್ಧಿಯಾದಾಗ ಆ ಊರು ಸುಭಿಕ್ಷೆಯಾಗುತ್ತದೆ ಎಂಬ ನಂಬಿಕೆ ನಮ್ಮದು.


ಹಾಗಾಗಿ ಬಳಂಜ ಶಾಲೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ದಾನ ನೀಡಿದ ಪುಣ್ಯಕ್ಷೇತ್ರವಿದು. ಈ ಶಾಲೆಯ ಹಲವು ಕಾಮಗಾರಿಗಳಿಗೆ ಅನುದಾನ ನೀಡಿದ್ದೇನೆ. ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ. ವಸಂತ ಸಾಲಿಯಾನ್ ಕಾಪಿನಡ್ಕ,ಬಳಂಜ ಶಾಲಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯೋಜನಾಧಿಕಾರಿ ಅಶೋಕ್, ಅಳದಂಗಡಿ ಸೊಸೈಟಿ ಅಧ್ಯಕ್ಷ, ಶಿಕ್ಷಣ ಟ್ರಸ್ಟ್ ಸದಸ್ಯ ರಾಕೇಶ್ ಹೆಗ್ಡೆ, ಶಿವಾಜಿ ಫ್ರೆಂಡ್ಸ್ ಕ್ಲಬ್ ನೇತಾಜಿ ನಗರ ಇದರ ಮಾಜಿ ಅಧ್ಯಕ್ಷ ಜಗದೀಶ್ ರೈ ಹಾನಿಂಜ, ಬಳಂಜ ಶಾಲಾ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ರತ್ನರಾಜ್ ಜೈನ್, ಶಿಕ್ಷಣ ಟ್ರಸ್ಟ್ ಸದಸ್ಯರಾದ ಸಂತೋಷ್ ಕುಮಾರ್ ಕಾಪಿನಡ್ಕ, ಪ್ರಮೋದ್ ಕುಮಾರ್ ಜೈನ್, ಸಂತೋಷ್ ಕೋಟ್ಯಾನ್, ಬಳಂಜ ಶಾಲಾ ಮುಖ್ಯೋಪಾಧ್ಯಾಯ ರಂಗಸ್ವಾಮಿ, ಶ್ರೀ ಉಮಾಮಹೇಶ್ವರ ಯುವಕ ಮಂಡಲದ ಅಧ್ಯಕ್ಷ ಸುಕೇಶ್ ಕುಮಾರ್ ಹಾನಿಂಜ, ಬಳಂಜ ಗ್ರಾ.ಪಂ. ಸದಸ್ಯರಾದ ರವೀಂದ್ರ ಬಿ ಅಮೀನ್, ಯಕ್ಷಿತಾ ದೇವಾಡಿಗ, ಯೋಜನೆಯ ಕೃಷಿ ವಿಭಾಗದ ಯೋಜನಾಧಿಕಾರಿ ಸಂತೋಷ್ ಹಾಕೋಟೆ, ಪ್ರಮುಖರಾದ ಗಣೇಶ್ ದೇವಾಡಿಗ ಸಂಭ್ರಮ, ಯತೀಶ್ ಕಪ್ರಾಜೆ ಸಿದ್ದವನ, ಯತೀಶ್ ದೇವಾಡಿಗ, ನಿತ್ಯಾನಂದ ಹೆಗ್ಡೆ ಅಶೋಕ್ ತೋಟದಪಲ್ಕೆ ಹಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ಯೋಜನೆಯ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕ ಕಿರಣ್ ಕುಮಾರ್ ಸ್ವಾಗತಿಸಿ. ಬಳಂಜ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸುಲೋಚನಾ ವಂದಿಸಿದರು.









