ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಆಯೋಜಿಸಿದ ಸ್ನೇಹ ಸಮ್ಮಿಲನ 2025 ಕಾರ್ಯಕ್ರಮ

0

ಬೆಳ್ತಂಗಡಿ: ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಆಯೋಜಿಸಿದ ಸ್ನೇಹ ಸಮ್ಮಿಲನ 2025 ಕಾರ್ಯಕ್ರಮವು ನ. 16ರಂದು ದುಬೈಯ ಆಶೀಯಾನ ಫಾರ್ಮ್ ಹೌಸ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರಗಿತು. ಬೆಳಗ್ಗೆ 9 ರಿಂದ ಆರಂಭವಾದ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ, ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ ಮಕ್ಕಳಿಗೆ ಹಾಗೂ ಉದ್ಯಮಿಗಳಿಗೆ ಸನ್ಮಾನ ಮಾಡಿ ಗೌರವಿಸಿಲಾಯಿತು.

ಮಧ್ಯಾಹ್ನದ ಭೋಜನ ನಂತರ ಗೌಡ ಸಮಾಜದ ಸದಸ್ಯರಿಗೆ ವಾಲಿಬಾಲ್ ಹಾಗೂ ತ್ರೋಬಾಲ್ ಪಂದ್ಯಾಟವನ್ನು ಏರ್ಪಡಿಸಲಾಯಿತು. ಸಮ್ಮೇಳನದ ಮುಖ್ಯ ಆಯೋಜಕರಾಗಿ ಹರೀಶ್ ಕೋಡಿ, ಸುರೇಶ್ ಕುಂಪಲ, ಸುನಿಲ್ ಮೊಟ್ಟೆ ಮನೆ, ತೇಜ ಕುಮಾರ್ ಕೊರಂಬಡ್ಕ, ಮೋಹನ್ ಕಡoಬಳ, ದಿಲೀಪ್ ಉಳುವಾರ, ಶರತ್ ಚೋಕ್ಕಾಡಿ,ರೋಶನ್ ಕಂಪ, ಸುಪ್ರೀತ್ ಕುಂಡಡ್ಕ, ಜೀವನ್ ಗೌಡ ಕುಂಜತಾಡಿ, ಯತೀಶ್ ಗೌಡ, ರತೀಶ್ ಬಗ್ಗನ ಮನೆ, ಆಶೀಶ್ ಕೋಡಿ, ಮೀನಾ ಹರೀಶ್ ಕೋಡಿ, ಪುಲೋಮ ಮಹೇಂದ್ರ ಕೊಳಂಬೆ, ಹಾಗೂ ಇತರ ಸದಸ್ಯರು ಶ್ರಮಿಸಿದ್ದರು. ಯುಎಇಯ ವಿವಿಧ ಎಮಿರೇಟ್ಸ್ ನಲ್ಲಿ ನೆಲೆಸಿರುವ ಸುಮಾರು 300ಕ್ಕೂ ಮಿಕ್ಕಿದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಹೊದ್ದೆಟ್ಟಿ ರಾಮಚಂದ್ರ ವಹಿಸಿ ಕೊಂಡಿದ್ದು, ಮುಖ್ಯ ಅತಿಥಿಯಾಗಿ ಮುಕ್ಕಾಟಿ ಕಿಶೋರ್ ಭಾಗವಹಿಸಿದ್ದರು. ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ನಿತಿನ್ ದೊರ್ತೋಡಿ ಸಾರಥ್ಯದೊಂದಿಗೆ ಯುವ ನಿರೂಪಕಿ ಶ್ರಾವ್ಯ ಗೌಡ ಹಾಗೂ ರಕ್ಷಿತಾ ಸುಪ್ರೀತ್ ನೆರವೇರಿಸಿದರು.

LEAVE A REPLY

Please enter your comment!
Please enter your name here