ಕಾಶಿಪಟ್ಣ: ಜನಸ್ಪಂದನ ಕಾರ್ಯಕ್ರಮ-ಅಕ್ರಮ-ಸಕ್ರಮ ಸಮಸ್ಯೆಯನ್ನು ಪರಿಹರಿಸುವಂತೆ ಗ್ರಾಮಸ್ಥರ ಆಗ್ರಹ

0

ಬೆಳ್ತಂಗಡಿ: ಅವರು ನ.18ರಂದು ಕಾಶಿಪಟ್ಣ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಶಿಪಟ್ಣ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಧಿಕಾರಿಗಳ ಬೇಜವಾಬ್ದಾರಿತನ ಕರ್ತವ್ಯ ಜನರಿಗಾಗಿ ಮಾಡುವ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರೇ ಇಲ್ಲ. ಇಲ್ಲಿ ಅಧಿಕಾರಿಗಳೇ ತುಂಬಿದ್ದಾರೆ. ಕಾರ್ಯಕ್ರಮದ ಬಗ್ಗೆ ನಮಗೆ ಹಿಂದಿನ ದಿನದಂದು ವಾಟ್ಸಾಪ್ ಮೂಲಕ ಮಾಹಿತಿ ಬಂತು. ಹೀಗಾಗಿ, ಇನ್ನೊಮ್ಮೆ ಜನಸ್ಪಂದನ ಕಾರ್ಯಕ್ರಮ ಮಾಡಬೇಕು ಎಂದು ಕಾಶಿಪಟ್ಣ ಗ್ರಾಮಸ್ಥರು ಒತ್ತಾಯಿಸಿದ ಘಟನೆ ನಡೆದಿದೆ.

ಗ್ರಾಮಸ್ಥ ಶೈಲೇಶ್ ಮಾತನಾಡಿ, ವಾಟ್ಸಪ್ ಇಲ್ಲದವರಿಗೆ ಜನಸ್ಪಂದನೆ ಬಗ್ಗೆ ಮಾಹಿತಿಯೇ ಇಲ್ಲ ಎಂದರು. ಈ ವೇಳೆ ಶಾಸಕ ಹರೀಶ್ ಪೂಂಜ ಪ್ರತಿಕ್ರಿಯಿಸಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಅವರಲ್ಲಿ ಈ ಬಗ್ಗೆ ವಿಚಾರಿಸಿದರು. ಅವರು ನ. 13ರಂದು ಕಾರ್ಯಕ್ರಮದ ಮಾಹಿತಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ತಿಳಿಸಲಾಗಿದೆ ಎಂದರು. ಸಭೆಯ ಮಾಹಿತಿ ಸದಸ್ಯರಿಗೆ ಯಾವಾಗ ತಿಳಿಸಿದ್ದೀರಿ ಎಂದು ಪಿಡಿಒ ಅವರಲ್ಲಿ ಪ್ರಶ್ನಿಸಿದಾಗ, ಇನ್ನೊಂದು ಪಂಚಾಯತ್‌ನಲ್ಲಿ ಕಾರ್ಯಕ್ರಮದ ಒತ್ತಡ ಇದ್ದುದರಿಂದ ಗ್ರೂಪಿನಲ್ಲಿ ಸಂದೇಶ ಹಾಕಲಾಗಿದೆ ಎಂದು ತಿಳಿಸಿದರು.

ಇನ್ನೊಂದು ಪಂಚಾಯತ್ ಕೆಲಸದ ಒತ್ತಡದ ಬಗ್ಗೆ ಇಲ್ಲಿ ತಿಳಿಸಬೇಡಿ. ಬೇಜವಾಬ್ದಾರಿಯ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಡಿ ಎಂದು ಆಕ್ರೋಶಗೊಂಡ ಶಾಸಕ ಹರೀಶ್ ಪೂಂಜ, ಕರ್ತವ್ಯ ಲೋಪ ಎಸಗಿದ ಪಿಡಿಒ ಅವರಿಗೆ ಶೋಕಾಸ್ ನೋಟೀಸ್ ನೀಡುವಂತೆ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರಿಗೆ ಸೂಚನೆ ನೀಡಿದರು. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಜನಸ್ಪಂದನ ಸಭೆ ನಡೆಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

ರಸ್ತೆ ಸರಿಪಡಿಸಬೇಕು:ಗ್ರಾ.ಪಂ ಸದಸ್ಯ ರವೀಂದ್ರ ಮಾತನಾಡಿ ಕಾಶಿಪಟ್ಣ-ಪಡಂತಡ್ಕ ರಸ್ತೆ ಅರ್ಧದಲ್ಲೇ ಬಾಕಿಯಾಗಿದೆ. ಅದನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನಾನು ಹಲವಾರು ಸಚಿವರಿಗೆ ಬಾರಿ ಮನವಿ ಮಾಡಿದ್ದೇನೆ. ಅನುದಾನ ಕೊಡುವ ಭರವಸೆ ಇದೆ. ಅದಲ್ಲದೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಯಾವುದೇ ರೀತಿಯ ಅಭಿವೃದ್ಧಿ ಕೆಲಸಕ್ಕೆ ಅನುದಾನ ಬರುತ್ತಿಲ್ಲ ಎಂದು ಹೇಳಿದರು. ಮೂಡಬಿದ್ರೆ, ಕಾಶಿಪಟ್ಣ, ಸಾವ್ಯ, ಅಡಿಂಜೆ, ಬೆಳ್ತಂಗಡಿ ರಸ್ತೆಗೆ ಸರ್ಕಾರಿ ಬಸ್ ಹಾಕಬೇಕು ಎಂದು ಗ್ರಾಮಸ್ಥರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಇದರ ಬಗ್ಗೆ ದಿಶಾ ಮೀಟಿಂಗ್‌ನಲ್ಲಿ ಚರ್ಚೆ ಮಾಡಿzನೆ. ಆದಷ್ಟು ಬೇಗ ಸರ್ವೇ ಮಾಡಿ ಬಸ್ ಹಾಕುವ ವಿಶ್ವಾಸ ಇದೆ ಎಂದು ಹೇಳಿದರು.

ಆಕ್ರಮ-ಸಕ್ರಮ ಸಮಸ್ಯೆ ಪರಿಹರಿಸಬೇಕು:ಕಾಶಿಪಣ್ಣ ಗ್ರಾಮದಲ್ಲಿ ಅಕ್ರಮ ಸಕ್ರಮ ಸಮಸ್ಯೆ ಇದೆ. ಮಂಜೂರಾತಿಯಾಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದರು. ಪ್ರತಿಕ್ರಿಯಿಸಿದ ಶಾಸಕರು ಕಂದಾಯ ಸಚಿವಾಲಯದ ಆಪ್‌ನಿಂದ ಆಗಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಕಳೆದ ಅವಧಿಯಲ್ಲಿ ಎಷ್ಟು ಅಕ್ರಮ ಸಕ್ರಮವಾಗಿದೆ ಎಂದು ಗ್ರಾಮಸ್ಥರು ಶಾಸಕರ ಬಳಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಕಳೆದ ಅವಧಿಯಲ್ಲಿ ೨೫೬೦ ಅಕ್ರಮ ಸಕ್ರಮ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಾಡಲಾಗಿತ್ತು. ಅದರಲ್ಲಿ 258 ಸಿಟ್ಟಿಂಗ್ ಆಗಿತ್ತು. ಈ ಬಾರಿ 30ರಲ್ಲಿ 8 ಸಿಟ್ಟಿಂಗ್ ಮಾತ್ರ ನಡೆದಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಕಾಶಿಪಟ್ಣ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಉಪಾಧ್ಯಕ್ಷೆ ಶುಭವಿ, ತಹಶೀಲ್ದಾರ್ ಪೃಥ್ವಿ ಸಾನಿಕಂ, ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ್ ಸ್ವಾಗತಿಸಿ, ಪಂಚಾಯತ್ ಅಧ್ಯಕ್ಷ ಸತೀಶ್ ಕಾಶಿಪಟ್ಣ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here