ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನಿಂದ ನಿಕಾನ್ ಕ್ಯಾಮರಾದ ಬಗ್ಗೆ ಕಾರ್ಯಗಾರ

0

ಬೆಳ್ತಂಗಡಿ: ವಲಯದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಎಸ್. ಕೆ. ಪಿ. ಎ. ಸದಸ್ಯರಿಗಾಗಿ ಜಿಲ್ಲಾ ಮಟ್ಟದ ಒಂದು ದಿನದ ನಿಕಾನ್ ಕ್ಯಾಮರಾದ ಬಗ್ಗೆ ಕಾರ್ಯಗಾರವನ್ನು ನ. 18 ಹಮ್ಮಿಕೊಳ್ಳಲಾಯಿತು.

ನಿಕಾನ್ ಕ್ಯಾಮರಾದ ಡೀಲರ್ ಮಹಾವೀರ ಏಜೆನ್ಸಿ ಮoಗಳೂರು ಅವರ ಸಹಕಾರದೊಂದಿಗೆ ಕoಪನಿಯ ತರಬೇತುದಾರ ಸ್ಟೆರಿನ್‌ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ವಲಯದ ಗೌರವಾಧ್ಯಕ್ಷ ವಿಲ್ಸನ್ ಬೆಳ್ತಂಗಡಿ, ಅಧ್ಯಕ್ಷ ರವಿ ಪೂಜಾರಿ ನಾರಾವಿ, ಪ್ರಧಾನ ಕಾರ್ಯದರ್ಶಿ ದಾಮೋದರ್ ಗುರುವಾಯನಕೆರೆ, ಕೋಶಾಧಿಕಾರಿ ಸುಜಿತ್ ರೈ ಪದ್ಮುಂಜ, ಛಾಯಾ ಕಾರ್ಯದರ್ಶಿ ಸoದೇಶ್ ನಿಡ್ಲೆ, ಉಪಸ್ಥಿತರಿದ್ದರು. ಸ್ಟೆರಿನ್ ಅವರು‌ ಕ್ಯಾಮರಾದ ವಿಶೇಷ ಟೆಕ್ನಾಲಜಿಯ ಬಗ್ಗೆ ತರಬೇತಿ ನೀಡಿದರು. ಅವರೊಂದಿಗೆ ಕಂಪನಿಯ ಸೇಲ್ಸ್ ಮೇನೆಜರ್ ಮಹೇಶ್, ಸೇಲ್ಸ್ ಇನ್ ಚಾರ್ಜ್ ಶ್ರೀನಿವಾಸ್, ಟೀಂ ಲೀಡರ್ ರೂಪೇಶ್ ಸಹಕಾರ ನೀಡಿದರು. ಸುಮಾರು 55 ಎಸ್. ಕೆ. ಪಿ. ಎ ಸದಸ್ಯರು ತರಬೇತಿಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here