



ಬೆಳ್ತಂಗಡಿ: ಮುಗುಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಆವಾಸೀಯ ವಿದ್ಯಾಲಯ ಬೆಳ್ತಂಗಡಿಯಲ್ಲಿ ನ. 15ರಂದು ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಹಲವು ಪ್ರಶಸ್ತಿಗಳನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.

ಸದ್ವಿನ್ (4ನೇ) ಭಕ್ತಿ ಗೀತೆಯಲ್ಲಿ ಪ್ರಥಮ ಸ್ಥಾನ ಹಾಗೂ ಜುವೆಲ್ ರಿಯಾ ಡಿಸೋಜ (4ನೇ) ಇಂಗ್ಲೀಷ್ ಕಂಠಪಾಠದಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.* ವೆಲೋನ್ ಝಾಕ್ ಮೋನಿಸ್ (4ನೇ) ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ,* ವಿಲೋನ ಏಂಜಲ್ ಮೋನಿಸ್(7ನೇ) ಕಥೆ ಹೇಳುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ* ಮನ್ವಿತಾ ಕ್ರಾಸ್ತಾ (7ನೇ) ಕನ್ನಡ ಕಂಠಪಾಠದಲ್ಲಿ ದ್ವಿತೀಯ ಸ್ಥಾನ * ವಿಭೀಷಾ (6ನೇ) ದೇಶ ಭಕ್ತಿ ಗೀತೆಯಲ್ಲಿ ದ್ವಿತೀಯ ಸ್ಥಾನ * ಅದಿತಿ (5ನೇ) ಅಭಿನಯ ಗೀತೆಯಲ್ಲಿ ದ್ವಿತೀಯ ಸ್ಥಾನ * ಅನುಷಾ ಪ್ರೀಮ ಸಾಂತ್ಮಯೋರ್(4ನೇ) ಕಥೆ ಹೇಳುವ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕ ಗುರು ವೋಲ್ಟರ್ ಡಿಮೆಲ್ಲೋ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಗುರು ಕ್ಲಿಫರ್ಡ್ ಪಿಂಟೋ ಅವರು ಅಭಿನಂದಿಸಿದರು.









