ಕರಾಯ: ಶ್ರೀ ಕೃಷ್ಣ ಭಜನಾ ಮಂದಿರ ಭಜನಾ ತರಬೇತಿ ಕಾರ್ಯಗಾರ

0

ಬೆಳ್ತಂಗಡಿ: ತಾಲೂಕು ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ಕರಾಯ ಶ್ರೀ ಕೃಷ್ಣ ಭಜನಾ ಮಂದಿರ ಮತ್ತು ಪರ್ಯಾಯ ಶ್ರೀ ಪುತ್ತಿಗೆ ಮಠ, ಉಡುಪಿ ಶ್ರೀ ಕೃಷ್ಣ ಮಠ ಇಲ್ಲಿನ ವಿಶ್ವಾಗೀತಾ ಪರ್ಯಾಯ 2024-2026ರ ಗೀತೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಕಮ್ಮಟದ ಹಿರಿಯ ಸಂಪನ್ಮೂಲ ವ್ಯಕ್ತಿ ಸಂಗೀತ ವಿದುಷಿ ಉಷಾ ಹೆಬ್ಬಾರ್ ಮಣಿಪಾಲ ಅವರಿಂದ ಕರಾಯ ಶ್ರೀ ಕೃಷ್ಣ ಭಜನಾ ಮಂದಿರದ ಸಭಾಂಗಣದಲ್ಲಿ ಭಜನಾ ತರಬೇತಿ ಕಾರ್ಯಗಾರ ನಡೆಯಿತು.

ಕರಾಯ ವ್ಯಾಪ್ತಿಯ 5 ಭಜನಾ ಮಂಡಳಿಯ 250 ಭಜಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಜನ ಮಂಡಳಿಗಳಿಗೆ ತರಬೇತಿ ನೀಡಲಾಯಿತು. ಈ ತರಬೇತಿ ಕಾರ್ಯಗಾರದಲ್ಲಿ ಸಾವಿತ್ರಿ, ಬೆಳ್ತಂಗಡಿ ತಾಲೂಕು ಕುಣಿತ ಭಜನಾ ತರಬೇತುದಾರರ ತಂಡಡ ಅಧ್ಯಕ್ಷ ಸಂದೇಶ್ ಮದ್ದಡ್ಕ, ಭಜನ ಪರಿಷತ್ ಜಿಲ್ಲಾ ಸಮನ್ವಯಧಿಕಾರಿ ಸಂತೋಷ್ ಪಿ. ಅಳಿಯೂರು, ಕರಾಯ ಭಜನಾ ಮಂಡಳಿಯ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರಾ, ಭಜನ ಪರಿಷತ್ ರಾಜ್ಯಧ್ಯಕ್ಷ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು, ಭಜನಾ ತರಬೇತುದಾರರ ತಂಡ, ವಲಯ ಮೇಲ್ವಿಚಾರಕರರಾದ ವಿಶ್ವನಾಥ್, ಸೇವಾಪ್ರತಿನಿಧಿ ಸುಜಾತಾ, ಭಜನಾ ತರಬೇತುಧಾರರಾದ ನಾಗೇಶ್ ಬಿ. ನೆರಿಯ ಹಾಗೂ ಭಜನ ಮಂಡಳಿಯ ಸದಸ್ಯರು & ಪೋಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ವಲಯ ಮೇಲ್ವಿಚಾರಕ ವಿಶ್ವನಾಥ್ ಅವರು ಮಾಡಿದರು. ಧನ್ಯವಾದವನ್ನು ಮಂಡಳಿಯ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರಾ ಅವರು ನೆರವೇರಿಸಿದರು.

LEAVE A REPLY

Please enter your comment!
Please enter your name here