




ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಹಾಗೂ ಶ್ರೀ ಚಂದ್ರನಾಥ ಸ್ವಾಮಿಯ ದಿವ್ಯ ಸಾನಿಧ್ಯದಲ್ಲಿ ಹಲವಾರು ದಶಕಗಳಿಂದ ನಾಗಸ್ವರ ವಾದನದ ಮೂಲಕ ದೇವರ ಸೇವೆಯನ್ನು ಮಾಡುತ್ತಾ ಬಂದಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗಸ್ವರ ವಿದ್ವಾನ್ ಧರ್ಮಸ್ಥಳದ ಡಿ. ಅಣ್ಣು ದೇವಾಡಿಗ ರವರಿಗೆ ನಾಗಸ್ವರ ವಾದನದ ಅಸಾಧಾರಣ ವಿಧ್ವತ್ತಿಗೆ ಆಕಾಶವಾಣಿಯ “ಟಾಪ್ ಗ್ರೇಡ್ ಶ್ರೇಣಿಯು” ಪ್ರಾಪ್ತವಾಗಿರುತ್ತದೆ. ನಾಗಸ್ವರ ವಾದನದ ಸಂಗೀತ ಸಾಧನೆಗೆ ಸಿಕ್ಕಿರುವ ಬಹುದೊಡ್ಡ ಉಡುಗೊರೆಯಾಗಿದೆ









