


ಬೆಳ್ತಂಗಡಿ: ತಾಲೂಕಿನ ಗರ್ಡಾಡಿ ಗ್ರಾಮದ ಲಿಂಗದೋಡಿ ನಿವಾಸಿ ರವಿ ಭಂಡಾರಿ ಅವರ ಪುತ್ರಿ ಯಶ್ವಿತಾ ಭಂಡಾರಿ ಅವರು ಲೀವರ್ ವೈಫಲ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾರಣ (ಸುಮಾರು 40 ಲಕ್ಷ ) ಖರ್ಚು ವೆಚ್ಚ ಬೇಕಾಗಿರುವುದನ್ನು ಮನಗಂಡು ಸಮಾಜ ಸೇವಕ ಲಿಂಗದೋಡಿ ಸಚಿನ್ ದೇವಾಡಿಗ ಅವರು ತೋಡಾರು “ನವಚೇತನ ಸೇವಾಬಳಗ “ದ ಮುಖ್ಯಸ್ಥ ಜಯಂತ್ ಕೋಟ್ಯಾನ್ ಕುಕ್ಕೇಡಿ ಮತ್ತು ಸುಕೇಶ್ ಜಿ. ಅಂಚನ್ ತೋಡಾರು ಅವರಿಗೆ ತಿಳಿಸಿದಾಗ ಕೂಡಲೇ ಕಾರ್ಯಪರ್ವತರಾದ ಇವರ ಟೀಂ ಸುಮಾರು ಒಂದು ಲಕ್ಷದ ಇಪ್ಪತ್ತಾರು ಸಾವಿರದ ನೂರಪೂವತೈದು ರೂಪಾಯಿ (1,26,135) ದಾನಿಗಳ ಸಹಾಯದಿಂದ ಕಲೆಕ್ಷನ್ ಮಾಡಿ ನ.3ರಂದು ಯಶ್ವಿತಾ ಅವರ ಮನೆಗೆ ಬಂದು ಚೆಕ್ ರೂಪದಲ್ಲಿ ನೀಡಿರುತ್ತಾರೆ.


ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಬಿ. ಅಮೀನ್ ಬಳಂಜ, ಈ ಸಂಸ್ಥೆಯ ಸ್ಥಾಪಕ ಸುಕೇಶ್ ಜಿ. ಅಂಚನ್ ತೋಡಾರು ಹಾಗೂ ಜಯಂತ್ ಕೋಟ್ಯಾನ್ ಕುಕ್ಕೇಡಿ, ಪದಾಧಿಕಾರಿಗಳಾದ ವಿನಯ್ ಈದು ಬಟ್ಟೆನಿ, ದಯಾನಂದ ದೇವಾಡಿಗ ವೇಣೂರು, ಕಿರಣ್ ಕುಲಾಲ್ ಸಾಣೂರು, ರಕ್ಷಿತ್ ಕುಲಾಲ್ ಸಾಣೂರು, ಸುಮಂತ್ ಕುಲಾಲ್ ಸಾಣೂರು, ಸಚಿನ್ ದೇವಾಡಿಗ ಲಿಂಗದೋಡಿ, ಸುಶಾಂತ್ ಶೆಟ್ಟಿ ಪಡಂಗಡಿ, ಚರಣ್ ಕೋಟ್ಯಾನ್ ಕಾರ್ಕಳ, ಜಗನ್ನಾಥ್ ಶೆಟ್ಟಿ ಗರ್ಡಾಡಿ, ಲೋಹಿತ್ ಕೋಟ್ಯಾನ್ ಗರ್ಡಾಡಿ, ಪ್ರಶಾಂತ್ ಗರ್ಡಾಡಿ, ಪುರಂದರ ಪೂಜಾರಿ ಪೆರಾಜೆ ಉಪಸ್ಥಿತರಿದ್ದರು.









