


ಬೆಳಾಲು: ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುವ 15 ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದ ಸಮಾರೋಪ ಸಮಾರಂಭ ಅ. 26ರಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಅನಂತೇಶ್ವರ ಫ್ರೆಂಡ್ಸ್ ಅಧ್ಯಕ್ಷ ಸಂತೋಷ್ ನಾಯ್ಕ ಕುದ್ದoಟೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಮಾಚಾರು ” ಚೇತನ್ ಕನ್ಸ್ಟ್ರಕ್ಷನ್ ” ನ ಚೇತನ್ ಸಾಲ್ಯಾನ್, ಮಾಚಾರು, ಬೆಳಾಲು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಶಿವಕುಮಾರ ಬಾರಿತ್ತಾಯ ಪಾರಲ, ಮುಖ್ಯ ತೀರ್ಪುಗಾರ ಧರ್ಮೇಂದ್ರ ಕುಮಾರ್, ಸಿಂಧೂರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷೆ ನಿಶಾ ಯಶವಂತ್ ಬನಂದೂರು, ಅನಂತೇಶ್ವರ ಫ್ರೆಂಡ್ಸ್ ಇದರ ಉಪಾಧ್ಯಕ್ಷ ರೂಪೇಶ್ ಪೂಜಾರಿ ಪೋಸೊಟ್ಟು ,ಅನಂತೇಶ್ವರ ಫ್ರೆಂಡ್ಸ್ ಕಾರ್ಯದರ್ಶಿ ಹರ್ಷಿತ್ ಗೌಡ ಎರ್ಧೊಟ್ಟು ಉಪಸ್ತಿತರಿದ್ದರು.
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಗಳಾದ ಹರೀಶ್ ಗೌಡ ಆರಿಕೋಡಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಹರಿಪ್ರಸಾದ್ ಗೌಡ ಅರಣೆಮಾರು ಸ್ವಾಗತಿಸಿ, ಗಿರೀಶ್ ಗೌಡ ಮಂಜೋತ್ತು ಕಾರ್ಯಕ್ರಮ ನಿರೂಪಿಸಿದರು. ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಜೇತರ ಪಟ್ಟಿಯನ್ನು ಕಿರಣ್ ಸುವರ್ಣ ಇರಂತ್ಯಾರು ವಾಚಿಸಿದರು. ಯಶವಂತ್ ಗೌಡ ಬನಂದೂರು ವಂದಿಸಿದರು.









