


ಬೆಳ್ತಂಗಡಿ: ಬುರುಡೆ ಷಡ್ಯಂತ್ರದ ವಿಚಾರಣೆಗೆ ಸಂಬಂಧಿಸಿ ನಾಲ್ವರಿಗೆ ಎಸ್.ಐ.ಟಿ ನೊಟೀಸ್ ನೀಡಿದೆ. ಅ.27ರಂದು ಬೆ.10.30ಕ್ಕೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಹಾಜರಾಗಲು ಸೂಚಿಸಲಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಹಾಗೂ ವಿಠಲ ಗೌಡಗೆ ನೊಟೀಸ್ ನೀಡಲಾಗಿದೆ.




ಎಸ್ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮಾ ನೀಡಿರುವ ನೋಟೀಸ್ ನಲ್ಲಿ ವಿಚಾರಣೆಗೆ ಹಾಜರಾಗದೇ ಇದ್ದರೆ ಬಂಧನ ಮಾಡುವ ಎಚ್ಚರಿಕೆ ನೀಡಿ ನೊಟೀಸ್ ನೀಡಲಾಗಿದೆ. ಬಿಎನ್ ಎಸ್ಎಸ್ 35(3) ಅಡಿಯಲ್ಲಿ ಪ್ರದತ್ತವಾದ ಅಧಿಕಾರ ಬಳಸಿಕೊಂಡು ನೀಡಿದ ನೊಟೀಸ್ ನಲ್ಲಿ ಹಲವು ಅಂಶವನ್ನು ತನಿಖಾಧಿಕಾರಿ ದಯಾಮ ಉಲ್ಲೇಖಿಸಿದ್ದಾರೆ.










