


ಉಜಿರೆ: ಪೇಟೆಯಲ್ಲಿ ಮಂಜುಶ್ರೀ ಸ್ಟೋರ್ ಉದ್ಯಮವನ್ನು ನಡೆಸುತ್ತಿದ್ದ ರಾಜಾರಾಮ್ ಭಟ್ ಅವರು ಅ.24ರಂದು ಬೆಳಿಗ್ಗೆ ಮಂಗಳೂರಿನಲ್ಲಿ ನಿಧನ ಹೊಂದಿರುತ್ತಾರೆ. ಧರ್ಮಸ್ಥಳದ ದೀಪೋತ್ಸವದಲ್ಲಿ ಮಂಜುಶ್ರೀ ಚರ್ಮುರಿ ಉದ್ಯಮ, ಉಜಿರೆ ಪೇಟೆಯಲ್ಲಿ ಮಂಜುಶ್ರೀ ಸ್ಟೋರ್, ದೀಪಾವಳಿ ಸಂದರ್ಭದಲ್ಲಿ ಪಟಾಕಿ ಉದ್ಯಮ ಹಾಗೂ ಸ್ವತಃ ಆರ್ಕೆಸ್ಟ್ರ ತಂಡವನ್ನು ಕಟ್ಟಿಕೊಂಡು ಉಜಿರೆಯಲ್ಲಿ ಜನಾನುರಾಗಿಯಾಗಿದ್ದರು. ಪ್ರಸ್ತುತ ಮಂಗಳೂರಿನಲ್ಲಿ ಪತ್ನಿ ಮತ್ತು ಮಗನೊಂದಿಗೆ ವಾಸ್ತವ್ಯವಿದ್ದು ಇತ್ತೀಚೆಗೆ ಅನಾರೋಗ್ಯಕ್ಕೆ ಈಡಾಗಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಸ್ವಗೃಹದಲ್ಲಿ ನಿಧನ ಹೊಂದಿರುತ್ತಾರೆ.


ಮೃತರು ಪತ್ನಿ, ಮಕ್ಕಳನ್ನು ಅಗಲಿರುತ್ತಾರೆ. ಮೃತರ ಅಂತಿಮ ವಿಧಿ ವಿಧಾನಗಳು ಮಂಗಳೂರಿನ ಉರ್ವ ಮಾರ್ಕೆಟ್ ಬಳಿಯಲ್ಲಿ ಇರುವ ಸ್ವಗೃಹದಲ್ಲಿ ನಡೆಯಲಿದೆ.










