




ಬೆಳ್ತಂಗಡಿ: ವಾಮದಪದವು ನಿವಾಸಿ ನಾರಾಯಣ್ ಕುಲಾಲ್ (70ವ) ಅವರು ಅ.18ರಂದು ಮಧ್ಯಾಹ್ನ 1ಗಂಟೆ ಸುಮಾರಿಗೆ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದಾಗೆ ಚೇತನ್ ಕುಮಾರ್ ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾರಾಯಣ್ ಕುಲಾಲ್ ಅವರು ಪತ್ತೆಯಾದಲ್ಲಿ ದೂ.ಸಂಖ್ಯೆ: 08256-286375, ದ.ಕ. ಕಂಟ್ರೋಲ್ ರೂಂ 0824-2220500 ಗೆ ಈ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.










