ಬೆಳಾಲು: ಮಾಯ ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿಯಿಂದ ಅ. 23ರಂದು ದೀಪಾವಳಿ ಹಬ್ಬದ ಪ್ರಯುಕ್ತ ಮಾಯ ಮಹಾದೇವ ದೇವಸ್ಥಾನದ ವಠಾರದಲ್ಲಿ ನಡೆಯುವ 43ನೇ ವರ್ಷ ದ ಕ್ರೀಡಾಕೂಟದ ಅಂಗವಾಗಿ ಭಜನಾ ಮಂಡಳಿ ಸದಸ್ಯರಿಂದ ಹಾಗೂ ಊರವರಿಂದ ಶ್ರಮದಾನ ಅ. 12ರಂದು ನೆರವೇರಿತು.
ಶ್ರಮದಾನಕ್ಕೆ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಭಜನಾ ಮಂಡಳಿ ವತಿಯಿಂದ ಪುಸ್ತಕ, ಪೆನ್ನು ನೀಡಿ ಗೌರವಿಸಲಾಯಿತು. ಭಜನಾ ಮಂಡಳಿ ಅಧ್ಯಕ್ಷ ಹರೀಶ್ ಆಚಾರ್ಯ, ಕಾರ್ಯದರ್ಶಿ ಶಿವಪ್ರಸಾದ್, ಗೌರವಾಧ್ಯಕ್ಷ ಕೃಷ್ಣಪ್ಪ ಗೌಡ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ದಿನೇಶ್ ಎಂ.ಕೆ., ವ್ಯವಸ್ಥಾಪಕ ಶೇಖರ ಗೌಡ, ಭಜನಾ ಮಂಡಳಿ ಪದಾಧಿಕಾರಿಗಳು ಸದಸ್ಯರು, ಊರವರು ಉಪಸ್ಥಿತರಿದ್ದು ಸಹಕರಿಸಿದರು.