ಮುಂಡಾಜೆ: ತೆರೆದ ಚರಂಡಿಗೆ ಬಿದ್ದು ಶಿಕ್ಷಕನಿಗೆ ಗಾಯ

0

ಮುಂಡಾಜೆ: ಬ್ಯಾನರ್ ಕಟ್ಟುವ ವೇಳೆ ತೆರೆದ ಚರಂಡಿಗೆ ಬಿದ್ದ ಶಿಕ್ಷಕರೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ಅ. 9ರಂದು ನಡೆದಿದೆ. ಮುಂಡಾಜೆ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಮೈಸೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟದ ಬ್ಯಾನರನ್ನು ಮಂಗಳೂರು-ವಿಲ್ಲುಪುರಂ ಹೆದ್ದಾರಿಯ ಸೋಮಂತಡ್ಕ ರಸ್ತೆ ಬದಿಯ ಪ್ರದೇಶದಲ್ಲಿ ಅಳವಡಿಸಲು ಸ್ವಯಂಸೇವಕರ ಜತೆ ಸಂಜೆ ಶಿಕ್ಷಕ ತೆರಳಿದ್ದರು. ಬ್ಯಾನರ್ ಕಟ್ಟುವ ಸಮೀಪ ತೆರೆದ ಚರಂಡಿ ಗಮನಕ್ಕೆ ಬರದ ಕಾರಣ ಸುಮಾರು 5 ಅಡಿ ಆಳಕ್ಕೆ ಬಿದ್ದು ಕಾಲಿಗೆ ಗಂಭೀರ ಸ್ವರೂಪದ ಗಾಯಗಳಿಗೆ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತೆರೆದ ಚರಂಡಿ ಸಮಸ್ಯೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಂಗವಾಗಿ ಬೆಳ್ತಂಗಡಿ ತಾಲೂಕಿನಲ್ಲಿ ರಸ್ತೆ ಬದಿ ಚರಂಡಿಗಳನ್ನು ನಿರ್ಮಿಸಲಾಗಿದ್ದು ಇದನ್ನು ಸಂಪೂರ್ಣ ಮುಚ್ಚಲಾಗಿಲ್ಲ ಚರಂಡಿ ಭಾಗ ಅಲ್ಲಲ್ಲಿ ತೆರೆದುಕೊಂಡಿದ್ದು ಈಗಾಗಲೇ ಹಲವರು ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವು ಬಾರಿ ಮನವರಿಕೆ ಮಾಡಲಾಗಿದೆ. ಸಂಬಂಧಪಟ್ಟವರು ಒಂದೆರಡು ಕಡೆ ಮಾತ್ರ ಸ್ಲ್ಯಾಬ್ ಅಳವಡಿಸುತ್ತಿದ್ದಾರೆ. ಇದರಿಂದ ಪಾದಚಾರಿಗಳಲ್ಲಿ ಗೊಂದಲ ಉಂಟಾಗುತ್ತಿದ್ದು ಚರಂಡಿಗೆ ಬಿದ್ದು ಗಾಯಗೊಳ್ಳುತ್ತಿರುವುದು ಮುಂದುವರೆದಿದೆ.

LEAVE A REPLY

Please enter your comment!
Please enter your name here