ಸುಲ್ಕೇರಿ: ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಕನಕಮಾಲ ಸಮರ್ಪಣೆ ಮತ್ತು ಧಾರ್ಮಿಕ ಸಭೆ ಹಾಗೂ ಅಭಿನಂದನ ಸಭೆಯು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪಾರ್ಶ್ವನಾಥ ಜೈನ್ ಅವರ ಅಧ್ಯಕ್ಷತೆಯಲ್ಲಿ ಸೆ.28ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ. ಪುಷ್ಪಗಿರಿ ಉರುವಲು, ದೇವದಾಸ್ ಶೆಟ್ಟಿ ಹಿಬರೋಡಿ, ಅಪರ ಸರ್ಕಾರಿ ವಕೀಲ ಮನೋಹರ್ ಕುಮಾರ್ ಉಪಸ್ಥಿತರಿದ್ದರು.

ಅಪರ ಸರ್ಕಾರಿ ವಕೀಲ ಮನೋಹರ್ ಅವರು ಮತನಾಡಿ, ಸುಲ್ಕೇರಿ ಗ್ರಾಮ ಪಶ್ಚಿಮ ಘಟ್ಟದ ಭಾಗ ಇಲ್ಲಿ ನೀರಿನ ಸಮಸ್ಯೆ ಇಲ್ಲ, ಈ ಗ್ರಾಮ ಹಲವು ಉತ್ತಮ ಕೃಷಿಕರನ್ನು ಹೊಂದಿದೆ. ಕೃಷಿಯಲ್ಲಿ ಇರುವ ನೆಮ್ಮದಿ ಬೇರೆ ಯಾವ ಕೃಷಿಯಲ್ಲಿಯೂ ಇಲ್ಲ.ಭಜನೆ ಇಂದ ನೆಮ್ಮದಿ ದೊರಕುತ್ತದೆ. ಮಹಮ್ಮಾಯಿ ದೇವಸ್ಥಾನ ದವರು ಸೇವಾ ಸಮಿತಿಯನ್ನು ಆರಂಭಿಸಿರುವುದು ನಿಜಕ್ಕೂ ಸಂತೋಷದ ವಿಷಯ.ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಇದರಿಂದ ಆಗುತ್ತಿದೆ.ನಾವು ಎಲ್ಲರೂ ಮನೆಯಿಂದ ಹೊರ ಬಂದು ಪ್ರಾರ್ಥನಾ ಮಂದಿರಗಳಿಗೆ ಹೋಗಿ ಪುಣ್ಯ ಪಡೆಯುವ ಕೆಲಸ ಆಗಬೇಕು. ದಸರಾ ಎನ್ನುವುದು ಅಧರ್ಮದ ವಿರುದ್ಧ ಧರ್ಮದ ಗೆಲುವು ಸಾಧಿಸುವ ಕಾಲ. ನಮ್ಮ ಪೂರ್ವಜರು ಜಾತಿಯ ವಿಷಯದಲ್ಲಿ ಕಷ್ಟ ಅನುಭವಿಸಿದರು ಇಂದು ಅದು ಕಮ್ಮಿ ಆಗಿದೆ ಸಮಾಜದ ಸುಧಾರಣೆ ಆಗಿದೆ ಬದಲಾವಣೆಯ ಯುಗ ಇದು. ಇಂದು ದೇವಾಲಯಗಳಲ್ಲಿ ಯಾವುದೇ ಜಾತಿ ಮತ ಎಂಬುವ ಬೇಧ ಇಲ್ಲ.ನಾವು ನಮ್ಮ ಕೆಲಸದ ಮೂಲಕ ಸಮಾಜ ಗುರುತಿಸುವ ವ್ಯಕ್ತಿ ಆಗಬೇಕು ಎಂದು ಹೇಳಿದರು.

ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ ಪುಷ್ಪಗಿರಿ ಮಾತನಾಡಿ, ನವರಾತ್ರಿ ಪುಣ್ಯ ಸಮಯದಲ್ಲಿ ದೇವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ನಾರಾಯಣ ಗುರು ಕೋಟಿ ಚೆನ್ನಯ ಮುಂತಾದ ಮಹಾನ್ ವ್ಯಕ್ತಿಗಳ ಆಶೀರ್ವಾದ ನಮ್ಮ ಮೇಲಿರಲಿ. ಹಿಂದೆ ಒಂದು ದೇವಾಲಯಗ ಲೀಗೆ ಹೋಗಬೇಕಾದರೆ ಬಹಳ ಕಷ್ಟ ಇತ್ತು ಆದರೆ ಇಂದು ಜನರಿಗೆ ಬಹಳ ಅನುಕೂಲ ಮತ್ತು ಸೌಲಭ್ಯಗಳು ಇದೆ ದೇವಾಲಯಗಳು ಜೀರ್ಣೋದ್ಧಾರಗೊಳುತ್ತಿದೆ. ಮಹಮ್ಮಾಯಿ ತಾಯಿ ಶಕ್ತಿ ದೇವತೆ. ಗ್ರಾಮದವರು ಮಾಡಿರುವ ಸೇವಾ ಸಮಿತಿ ಎಲ್ಲರೂ ಮೆಚ್ಚುವಂಥ ಕಾರ್ಯ.ಇಲ್ಲಿನ ಜನರು ಕಷ್ಟದಲ್ಲಿ ಇರುವ ವ್ಯಕ್ತಿ ಗೆ ಮನೆ ಕಟ್ಟಿ ಕೊಟ್ಟಿರುವ ಕೆಲಸ 10 ದೇವಾಲಯ ಕಟ್ಟಿದ ಕೆಲಸಕ್ಕೆ ಸಮ. ಬೆಳ್ತಂಗಡಿ ತಾಲೂಕು ದೇಶದಲ್ಲಿಯೇ ಮಾದರಿ ತಾಲೂಕು ಆಗಬೇಕು ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಪ್ರತಿ ಒಬ್ಬರಿಗೂ ಮನೆಯ ಆಶ್ರಯ ಸಿಗುವಂತೆ ಅಗಲಿ. ಪ್ರತಿಯೊಬ್ಬರಲ್ಲಿ ಹೃದಯ ಶ್ರೀಮಂತಿಗೆ ಬರಲಿ ಎಂದು ಹೇಳಿದರು.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪಾರ್ಶ್ವನಾಥ ಜೈನ್ ಮಾತನಾಡಿ, ಹಲವಾರು ಜನರಿಗೆ ಹಣವನ್ನು ಕಟ್ಟಿ ಇಡುವ ಗುಣವಿದೆ. ಒಳ್ಳೆಯ ಸಂಪಾದನೆ ಒಳ್ಳೆಯ ಕೆಲಸಕ್ಕೆ ಬಳಕೆಯಾದಾಗ ಸಮಾಜ ಸ್ವಾಸ್ಥ್ಯ ರೀತಿಯಲ್ಲಿ ಇರುತ್ತದೆ. ಮನುಷ್ಯರು ಹೇಗೆ ಇರಬೇಕು ಎಂದು ಬಸವಣ್ಣ ತಮ್ಮ ವಚನದಲ್ಲಿ ಹೇಳುತ್ತಾರೆ ಎಂದು ಹೇಳಿದರು.