ಕಲ್ಮಂಜ: ಸಿದ್ದಬೈಲು ಪರಾರಿ ಅಂಗನವಾಡಿಯಲ್ಲಿ ಅ. 3ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೋಟರಿ ಸಮುದಾಯ ದಳ ಜಂಟಿಯಾಗಿ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಅವರು ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ವಿಮುಕ್ತಿ ಸಂಸ್ಥೆಯ ಮೇಲ್ವಿಚಾರಕಿ ರೋಹಿನಿ ಅವರು ಪೌಷ್ಟಿಕ ಆಹಾರದ ಉಪಯೋಗಗಳು ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ಪ್ರಕಾಶ್ ಪ್ರಭು ಅವರು ಯಾವ ರೀತಿಯ ಪೌಷ್ಟಿಕ ಆಹಾರ ಸೇವಿಸಬಹುದು ಎಂಬುದರ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಉತ್ತಮ ಆಹಾರ ತಯಾರಿಸಿದ ತಾಯಂದಿರಿಗೆ ಬಹುಮಾನ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣಾದಿಕಾರಿ ಅಮ್ಮಿ, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಸವಿತಾ, ವಿಮುಕ್ತಿ ಸಂಸ್ಥೆಯ ಮೇಲ್ವಿಚಾರಕಿ ರೋಹಿಣಿ, ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ಪ್ರಕಾಶ್ ಪ್ರಭು, ಕಲ್ಮಂಜ ರೋಟರಿ ಸಮುದಾಯ ದಳದ ಕೋಶಾಧಿಕಾರಿ ಡಿ. ಜಯಂತ್ ರಾವ್ ಕಲ್ಮಂಜ, ಸದಸ್ಯರಾದ ರಾಘವ್ ಕಲ್ಮಂಜ, ಸತೀಶ್ ಭಟ್ ತಂಟ್ಯ, ಸುಂದರ ಆಚಾರ್ಯ, ಪಂಚಾಯತ್ ಸದಸ್ಯೆ ಶೋಭಾ, SDMC ಅಧ್ಯಕ್ಷ ದಿನೇಶ್ ಗೌಡ, ಆಶಾ ಕಾರ್ಯಕರ್ತೆಯರು, ಮಕ್ಕಳ ತಾಯಂದಿರು ಮತ್ತು ಸ್ತ್ರೀ ಶಕ್ತಿ ಸದಸ್ಯರು ಉಪಸ್ಥಿತರಿದ್ದರು. ಸರೋಜಿನಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಸಂತಿ ನಿರೂಪಿಸಿ, ಧನ್ಯವಾದವಿತ್ತರು.