ಬೆಳ್ತಂಗಡಿ: ಆರಂಬೋಡಿ ಗ್ರಾಮದ ಕಾಂತರಬೆಟ್ಟು ನಿವಾಸಿ ಹರಿಣಾಕ್ಷಿ ಅವರು ರಸ್ತೆಯಲ್ಲಿ ಕಳೆದುಕೊಂಡಿದ್ದ 6 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗನ್ನು ಜಯಂತ್ ಶೆಟ್ಟಿ ಹಕ್ಕೇರಿ ಅವರು ಹಸ್ತಾoತರ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಹರಿಣಾಕ್ಷಿ ಅವರು ತಾಯಿ ಮನೆಯಿಂದ ಅಳದಂಗಡಿ ಗಂಡನ ಮನೆಗೆ ಆಟೋ ರಿಕ್ಷಾದಲ್ಲಿ ಹೋಗುವಾಗ 6ಲಕ್ಷ ಚಿನ್ನ ಇದ್ದ ಬ್ಯಾಗ್ ಕಳೆದುಕೊಂಡಿದ್ದರು. ಈ ಬ್ಯಾಗ್ ಅಂಗರಕರಿಯ ರಸ್ತೆಯಲ್ಲಿ ಜಯಂತ್ ಶೆಟ್ಟಿ ಹಕ್ಕೇರಿ ಅವರಿಗೆ ಸಿಕ್ಕಿತ್ತು.
ಕೂಡಲೇ ಹರಿಣಾಕ್ಷಿ ಅವರ ಗಂಡ ವಿಶ್ವನಾಥ್ ಬಂಗೇರ ಅಳದಂಗಡಿ ಅವರನ್ನು ಸಂಪರ್ಕಿಸಿ ಹಸ್ತಾoತರ ಮಾಡಿ ಮಾನವೀಯತೆ ಮೆರೆದರು. ಇವರಿಗೆ ಆರಂಬೋಡಿ ಗ್ರಾಮದ ಪ್ರದೀಪ್ ಪಾಣಿಮೇರು, ಜಯಂತ್ ದೇಲೋಡಿ, ರಾಜೇಶ್ ಹುಲಿಮೇರು, ರಿಕ್ಷಾ ಚಾಲಕ ಯತೀಶ್ ಪಾಡ್ಯರು ಸಾಥ್ ನೀಡಿದರು.