ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯದ ಈ ವರ್ಷದ ನೂತನ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗಾಗಿ ಪರಸ್ಪರ ಪರಿಚಯ ಕಾರ್ಯಕ್ರಮವನ್ನು ಅ. 3ರಂದು ನಮ್ಮ ಕಾಲೇಜಿನಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಡಾ. ಜಿ. ಅರುಣ್ ಮಯ್ಯ, ಪ್ರಾಧ್ಯಾಪಕರು ಮತ್ತು ಡೀನ್ ಮಣಿಪಾಲ ಕಸ್ತೂರಬಾ ವೈದ್ಯಕೀಯ ಕಾಲೇಜು, ಇತರೇ ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿ, ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಅವರು ಮಾತನಾಡಿ, ನ್ಯಾಚುರೋಪತಿ ಶಿಕ್ಷಣದ ಮಹತ್ವ ಮತ್ತು ಅದರ ವಿಶಾಲವಾದ ಅವಕಾಶಗಳ ಕುರಿತು ವಿವರಿಸಿದರು.
ಉಪಪ್ರಾಂಶುಪಾಲೆ ಡಾ. ಸುಜಾತಾ ಕೆ.ಜೆ., ಹೊಸ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಹೃತ್ಪೂರ್ವಕ ಸ್ವಾಗತ ಕೋರಿದರು.
ಕಾರ್ಯಕ್ರಮದಲ್ಲಿ ಡಾ. ಎಚ್. ಬಿ. ಶಶಿಧರ್, ಪ್ರಾಧ್ಯಾಪಕರು, ರೋಗಶಾಸ್ತ್ರ ವಿಭಾಗ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮೈಸೂರು, ಡಾ. ಎಚ್. ಎನ್. ದಿನೇಶ್, ಪ್ರಾಧ್ಯಾಪಕರು/ಡೀನ್ ಮತ್ತು ನಿರ್ದೇಶಕರು, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮೈಸೂರು ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಡಾ. ಮನೋಜ್ ಕುಟ್ಟೇರಿ, ವೈದ್ಯಕೀಯ ನಿರ್ದೇಶಕರು ಮತ್ತು CEO, ಆತ್ಮನಾಥನ್ ವೆಲ್‌ನೆಸ್ ಸೆಂಟರ್, ಪುಣೆ ಅವರು ಉಪಸ್ಥಿತರಿದ್ದರು. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದ ವ್ಯಾಪಕ ಅವಕಾಶಗಳ ಕುರಿತು ಹಾಗೂ ತಮ್ಮ ವೃತ್ತಿಜೀವನದ ಅನುಭವಗಳನ್ನು ಹಂಚಿಕೊಂಡರು.
ಡಾ. ಬಿಂದು, ಡೀನ್ ಅವರು ಸಂಸ್ಥೆಯ ಬಗೆಗಿನ ಸವಿಸ್ತಾರ ಮಾಹಿತಿ, ಕಾಲೇಜಿನ ಬೋಧಕ ವರ್ಗ ಮತ್ತು ಸಿಬ್ಬಂದಿ ವರ್ಗದವರನ್ನು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ ಶೆಟ್ಟಿ ಉಪಸ್ಥಿತರಿದ್ದರು. ಡಾ. ಗೀತಾ ಬಿ. ಶೆಟ್ಟಿ, ಪ್ರಾಧ್ಯಾಪಕರು ಮತ್ತು ನ್ಯೂಟ್ರಿಷನ್ ವಿಭಾಗದ ಡೀನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರಿಗೂ ಧನ್ಯವಾದ ಸಮರ್ಪಣೆಯನ್ನು ಸಲ್ಲಿಸಿದರು.