ಬೆಳ್ತಂಗಡಿ: ಪ್ರಸಿದ್ಧ ಟಿವಿಸ್ ಮೋಟರ್ಸ್ ನಲ್ಲಿ ಅ. 2ರಂದು ಆಯುಧ ಪೂಜೆಯ ಪ್ರಯುಕ್ತ ಶೋ ರೂಮ್ ಶುದ್ದಿಕರಣ ನಡೆಯಿತು.
ಬೆಳ್ತಂಗಡಿ ವಿಮುಕ್ತಿ ಚಾರಿಟೇಬಲ್ ಸಂಸ್ಥೆಯ ಪ್ರದಾನ ಗುರುಗಳಾದ ಫಾ.ವಿನೋದ್ ಮಸ್ಕ ರೇನಸ್ ರವರು ಪ್ರಾರ್ಥನೆ ನಡೆಸಿ ಸಂಸ್ಥೆಯಲ್ಲಿ ಉಪಯೋಗಿಸುವ ಹಾಗೂ ಸಂಬಂಧ ಪಟ್ಟ ಉಪಕಾರಣಗಳನ್ನು ಆಶೀರ್ವಚನ ಮಾಡಿ ಸಂಸ್ಥೆಗೆ ಮಾಲಕರಿಗೆ, ಗ್ರಾಹಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಶುಭ ಹಾರೈಸಿದರು.
ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ನ ಪಾಲನ ಪರಿಷದ್ ನ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಆಯೋಗದ ಸಂಚಾಲಕಿ ಪೌಲಿನ್ ರೇಗೋ, ವಾರ್ಡಿನ ಗುರಿಕರ ಹಾಗೂ ನಿವೃತ್ತ ಶಿಕ್ಷಕಿ ಜೂಲಿಯಾನ ಡಿಸೋಜಾ, ಸಂಸ್ಥೆಯ ಮಾಲಕರ ಪತ್ನಿ ರೊಶನಿ ಲೋಬೊ, ಹಿರಿಯ ವಕೀಲ ಅಲೋಸಿಯಸ್ ಲೋಬೊ, ವೇರೋನಿಕಾ ಲೋಬೊ, ಜೆನೆವಿವ್ ಲೋಬೊ, ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ವರ್ತಕರ ಸಂಘದ ಕಾರ್ಯದರ್ಶಿ ಲಾನ್ಸಿ ಪಿರೇರ, ವಿಮಾ ಇನ್ಶೂರೆನ್ಸ್ ಪ್ರತಿನಿಧಿ ವಿನ್ಸೆಂಟ್ ಡಿಸೋಜಾ, ಶಿಕ್ಷಕಿ ಥಿಯೋಫಿಲ ಡಿಸೋಜಾ, CVC ಹಾಲ್ ನ ಮಾಲಕ ಜೇಮ್ಸ್ ಡಿಸೋಜಾ, ಸಂಸ್ಥೆಯ ಮ್ಯಾನೇಜರ್ ಅಶೋಕ್ ಮೋನಿಸ್ ಶಿಬಂದಿ ವರ್ಗದವರು, ಗ್ರಾಹಕರು ಹಾಗೂ ಆತ್ಮೀಯರು ಉಪಸ್ಥಿತರಿದ್ದರು.