ಕರಾಯ: ಗ್ರಾಮದ ದ. ಕ. ಜಿಲ್ಲೆಯ ಬಿಲ್ಲವ ಸಮಾಜದ ಪ್ರತಿಷ್ಠಿತ ಮುಗ್ಗ ಗುತ್ತು ಮನೆಯಲ್ಲಿ ಮುಗ್ಗ ಗುತ್ತು ಕುಟುಂಬ ಟ್ರಸ್ಟ್ ವತಿಯಿಂದ ಸೆ. 22ರಿಂದ 30ರ ವರೆಗೆ ನವರಾತ್ರಿ ಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಸೆ. 30ರಂದು ಮಧ್ಯಾಹ್ನ ಚಂಡಿಕಾ ಹೋಮ ನಡೆಯಿತು. ಮಂಗಳೂರು ವಿದ್ಯುತ್ ಪ್ರಸರಣ ನಿಗಮ ( ಮೆಸ್ಕಾಂ) ನೂತನ ಅಧ್ಯಕ್ಷರಾಗಿ ನೇಮಕ ಗೊಂಡಿರುವ ಮುಗ್ಗ ಗುತ್ತು ಕುಟುಂಬ ಟ್ರಸ್ಟ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಇವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಸಂಜೆ ತುಳಸಿ ಪೂಜೆ, ಬಾರ್ಯ ಪಿಲಿಗೂಡು ಶ್ರೀ ರಾಮಾಂಜನೇಯ ಭಜನಾ ಮಂಡಳಿ ಸದಸ್ಯರಿಂದ ವಿಶಾಲ ಬನ್ನೆಂಗಲ ಅವರ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು.
ಮುಗ್ಗ ಗುತ್ತು ಟ್ರಸ್ಟ್ ಉಪಾಧ್ಯಕ್ಷ ಜಗನ್ನಾಥ ಬಂಗೇರ, ಕಾರ್ಯದರ್ಶಿ ಭಗೀರಥ ಜಿ., ಕೋಶಾಧಿಕಾರಿ ದಿನೇಶ್ ಪೆದಮಲೆ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಟ್ರಸ್ಟ್ ಸದಸ್ಯರಾದ ಡಾ. ಯಶೋಧರ ಪೂಜಾರಿ, ಡಾ. ರಾಜಾರಾಮ್ ಕೆ. ಬಿ, ಚರಣ್ ಕೆ., ನವೀನ್ ಚಂದ್ರ ಕುಂವೆತ್ಯಾರು, ಶಾರದಾ ಕೃಷ್ಣ, ಜಾನಕಿ, ಹೇಮಾ ದಾಮೋದರ, ತುಕಾರಾಮ ಬಂಗೇರ, ಪ್ರಶಾಂತ್ ಕಂಡೆತ್ಯಾರು, ಕೀರ್ತಿ ಮೂರ್ಜೆ, ಮುಗ್ಗ ಗುತ್ತು ಟ್ರಸ್ಟ್ ಕುಟುಂಬ ಸದಸ್ಯರು ಹಾಜರಿದ್ದರು.