ಬೆಳ್ತಂಗಡಿ: ಓಡೀಲು ಶ್ರೀ ಮಹಾಲಿಂಗೇಶ್ವರ ಗೆಳೆಯರ ಬಳಗ ಅವರ ಆಶ್ರಯದಲ್ಲಿ ಗರ್ಡಾಡಿ ವಲಯದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅವರ ಸಹಕಾರದೊಂದಿಗೆ ಅ.5ರಂದು ಓಡಿಲ್ದ ಕಂಡೊಡು ಕೆಸರ್‌ದ ಗೊಬ್ಬು 2025 ಕಾರ್ಯಕ್ರಮ ನಡೆಯಲಿದೆ. ಓಡೀಲು ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯುವ ಕೆಸರ್‌ದ ಗೊಬ್ಬು ಕಾರ್ಯಕ್ರಮದಲ್ಲಿ ಪಡಂಗಡಿ, ಕುವೆಟ್ಟು, ಓಡಿಲ್ನಾಳ, ಸೋಣಂದೂರು ಗ್ರಾಮಕ್ಕೆ ಒಳಪಟ್ಟವರಿಗೆ ಮಾತ್ರ ಆಟೋಟ ಸ್ಪರ್ಧೆ ಇರಲಿದೆ. ಅಂಗನವಾಡಿ ಮಕ್ಕಳಿಂದ 10ನೇ ತರಗತಿಯ ಬಾಲಕ ಬಾಲಕಿಯರಿಗೆ ಹಾಗೂ ಮಹಿಳೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ಇರಲಿದೆ.