ಕೊರಿಂಜ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಹಾಗೂ ವಿಜಯ ದಶಮಿ ಉತ್ಸವ ಪ್ರಯುಕ್ತ ಸಭಾ ಕಾರ್ಯಕ್ರಮ

0

ಕೊರಿಂಜ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಹಾಗೂ ವಿಜಯ ದಶಮಿ ಉತ್ಸವ ಪ್ರಯುಕ್ತ ಸಭಾ ಕಾರ್ಯಕ್ರಮವನ್ನು ಅ.3ರಂದು ನಡೆಸಲಾಯಿತು. ಸಭಾಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮೋಕ್ತೇಸರ ಯೋಗೀಶ್ ಪೂಜಾರಿ ಕಡ್ತಿಲ ಅವರು ವಹಿಸಿದ್ದರು. ಧಾರ್ಮಿಕ ಉಪನ್ಯಾಸ ಮಾಡಿದಂತಹ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ರವೀಶ್ ಪಡುಮಲೆ ಅವರು ದೇವಸ್ಥಾನಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೌಲ್ಯಯುತ ಧಾರ್ಮಿಕ ಶಿಕ್ಷಣ, ಭಜನೆ, ಸಂಸ್ಕೃತಿ ಇವೆಲ್ಲವನ್ನೂ ಒಗ್ಗೂಡಿಸಿಕೊಂಡು ನಾವೆಲ್ಲಾ ನಡೆಯಬೇಕು.

ಕೊರಿಂಜ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆದು ಇದೀಗ ಪಂಚಲಿಂಗೇಶ್ವರನ ಸನ್ನಿಧಿಯಲ್ಲಿ ಮಕ್ಕಳ ಕುಣಿತ ಭಜನಾ ತಂಡವನ್ನು ದೀಪ ಪ್ರಜ್ವಲಿಸುವ ಮೂಲಕ ದೇ ಸ್ಥಾನದ ಶಕ್ತಿ ಹಾಗೂ ಭಕ್ತಿ ಬಹಳ ಹೆಚ್ಚಾಗಿದೆ. ಪ್ರತಿ ಮನೆಯಲ್ಲೂ ಸಂಜೆಯ ಸಮಯದಲ್ಲಿ ರಾಮಾಯಣ ಮಹಾಭಾರತ ಕಥೆಯನ್ನು, ಭಜನೆಯನ್ನು, ಮಕ್ಕಳ ಪೋಷಕರು ಕಲಿಸಬೇಕು. ನಮ್ಮಲ್ಲಿ ಧಾರ್ಮಿಕತೆಯನ್ನು ಯಾವೊತ್ತು ಕೂಡ ಕಡಿಮೆ ಮಾಡ ಬಾರದು ಎಂದು ತಿಳಿಸಿದರು.

ಭಜನ ಗುರುಗಳಾದ ನಾಗೇಶ ನೆರಿಯ ಇವರಿಗೆ ಗುರುವಂದನಾ ಕಾರ್ಯಕ್ರಮವನ್ನು ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಮಹಾಭಾರತ ಪುಸ್ತಕವನ್ನುವಿತರಿಸಲಾಯಿತು.

ವಾರಿಜ ವಿ. ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ರಂಜಿತ್ ಧರ್ಮಾಡಿ ಸ್ವಾಗತಿಸಿದರು. ಸೀತಾರಾಮ ಆಳ್ವ ಕೊರಿಂಜ ಕಾರ್ಯಕ್ರಮ ನಿರೂಪಿಸಿ,ವಿಜಯ ಕುಮಾರ್ ಕಲ್ಲಳಿ ಕೆಇವರ ಧನ್ಯವಾದದೊಂದಿಗೆ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here