ಕೊಕ್ಕಡ: ಮಂಡಲ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ವಿಜಯದಶಮಿ ಉತ್ಸವವು ಶ್ರೀರಾಮ ಸೇವಾ ಮಂದಿರದಲ್ಲಿ ಕೊಕ್ಕಡ ಮತ್ತು ಪಟ್ರಮೆ ಗ್ರಾಮಗಳನ್ನೊಳಗೊಂಡ ಕೊಕ್ಕಡ ಮಂಡಲದ ಸ್ವಯಂಸೇವಕರು ಮತ್ತು ಸಜ್ಜನ ಬಂಧುಗಳು, ಮಾತಾ ಭಗಿನಿಯರು ಪಾಲ್ಗೊಳ್ಳುವುದರ ಮೂಲಕ ನಡೆಯಿತು. ಕೊಕ್ಕಡ ಮಂಡಲದ ಸ್ವಯಂಸೇವಕರು ಸಂಘದ ಗಣವೇಶವನ್ನು ಧರಿಸಿ ಬಂದು ಸಂಘದ ಉಪವಿಷ್ಟ ವ್ಯಾಯಮದಲ್ಲಿ ತೊಡಗಿಸಿಕೊಂಡರು. ವಿಜಯದಶಮಿ ಉತ್ಸವದ ಅಧ್ಯಕ್ಷತೆಯನ್ನು ನಿವೃತ್ತ ಸೇನಾನಿ ಶ್ರೀಜಿತ್ ಪಡ್ಡಡ್ಕ ವಹಿಸಿದ್ದರು.

ಬೌದ್ಧಿಕನ್ನು ಗುರುವಾಯನಕೆರೆಯ ಎಕ್ಸೆಲ್ ಕಾಲೇಜಿನ ಪ್ರಾಂಶುಪಾಲ ಪ್ರಜ್ವಲ್ ಕಜೆ ಅವರು ನೆರವೇರಿಸಿಕೊಟ್ಟರು. ಮುಖ್ಯ ಶಿಕ್ಷಕ ಮಹೇಶ್, ಪ್ರಾರ್ಥನೆ ತೇಜಸ್, ಸ್ವಾಗತ ಮತ್ತು ಪರಿಚಯ ಪುರಂದರ ಕಡೀರ ಮಾಡಿದರು. ವೈಯಕ್ತಿಕ ಗೀತೆಯನ್ನು ವಿಕ್ರಮ್ ಮರುವಂತಿಲ ಹಾಡಿದರು. ಅಮೃತವಚನವನ್ನು ಶ್ರೇಯಸ್ ಕಡೀರ ವಾಚಿಸಿದರು. ಮಂಡಲ ಕಾರ್ಯವಾಹ ಸುದರ್ಶನ್ ಹಿತ್ತಿಲು ನಿರೂಪಿಸಿದರು. ಹರೀಶ್ ಅಪ್ರೋಡಿ ಧನ್ಯವಾದವಿತ್ತರು.