ಶಿಶಿಲ: ಕೆಲ ದಿನಗಳ ಹಿಂದೆ ಹೃದಯ ಸಮಸ್ಯೆಯಿಂದ ಮೃತ ಪಟ್ಟಿದ್ದ ಬಾಲಕ ಅಶ್ವಿನ್ ಮನೆಗೆ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ಮೃತ ಅಶ್ವಿನ್ ತಂದೆ ರಮೇಶ್ ಬೈರ ಕಟ್ಟ ಮತ್ತು ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ, ಸಿ.ಎ ಬ್ಯಾಂಕ್ ನಿರ್ದೇಶಕ ಕೊರಗಪ್ಪ ಗೌಡ, ರಾಧಾಕೃಷ್ಣ ಗುತ್ತು, ಸುಬ್ರಾಯ ಗೌಡ ಹಾಗೂ ಇತರ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.