ಉಜಿರೆ: ಜನಾರ್ಧನ ಸ್ವಾಮಿ ಗ್ಯಾರೇಜ್ ಆಯುಧ ಪೂಜೆ ಮತ್ತು ದಶಮಾನೋತ್ಸವ ಆಚರಣೆ

0

ಉಜಿರೆ: ಜನಾರ್ಧನ ಸ್ವಾಮಿ ಗ್ಯಾರೇಜ್ ಆಯುಧ ಪೂಜೆ ಮತ್ತು ದಶಮಾನೋತ್ಸವ ಕಾರ್ಯಕ್ರಮ ಅ. 1ರಂದು ನಡೆಯಿತು. ಜನಾರ್ಧನ ಸ್ವಾಮಿ ದೇವಳದ ಅನುವಂಶಿಯ ಆಡಳಿತ ಮುಖ್ಯಸ್ಥ ಶರತ್ ಕೃಷ್ಣ ಪಡ್ವೇಟ್ನಾಯ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ಯಾರೇಜ್ ಮಾಲಕ ಪಟ್ರಮೆ ಮಂಜುನಾಥ ರವರು ಧಾರ್ಮಿಕ ಹಾಗೂ ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಶರತ್ ಕೃಷ್ಣ ಪಡ್ವೇಟ್ನಾಯ, ಮೆಕ್ಯಾನಿಕ್ ವಿಭಾಗದಲ್ಲಿ ವಿಶೇಷ ಸಾಧನೆ ಮಾಡಿ ಮನೆ ಮಾತಾಗಿರುವ ಮೆಕ್ಯಾನಿಕ್ ಗೋಪಾಲ ಕೃಷ್ಣ ಹಾಗೂ ತನಗೆ ಗ್ಯಾರೇಜ್ ವಿಭಾಗದಲ್ಲಿ ಜೀವನ ನಡೆಸಲು ಸಹಕರಿಸಿ ಮಾರ್ಗದರ್ಶನ ನೀಡಿದ ಸಂಜೀವ ಗೌಡ ಕಾಯಿಲ ಅವರನ್ನು ಸನ್ಮಾನಿಸಲಾಯಿತು.

ಬಡ ಕುಟುಂಬದ ಎರಡು ವಿದ್ಯಾರ್ಥಿನಿಯರಿಗೆ ತಲಾ 25,000ದಂತೆ ವಿದ್ಯಾ ನಿಧಿ ನೀಡಿದರು ಅದಲ್ಲದೆ ಗ್ಯಾರೇಜ್ ಮಾಲಕ ಮಂಜುನಾಥ್ ರವರು ಓದಿ ಬೆಳೆದ ಪಟ್ರಮೆ ಸರಕಾರಿ ಶಾಲೆಗೆ 30,000 ದೇಣಿಗೆ ಹಾಗೂ ಅಲ್ಲಿಯ ಇನ್ನೆರಡು ಶಾಲೆಗಳಿಗೆ 20,000 ದೇಣಿಗೆ ನೀಡಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ದ.ಕ., ಉಡುಪಿ ಗ್ಯಾರೇಜ್ ಮಾಲಕರ ಸಂಘದ ಬೆಳ್ತಂಗಡಿ ವಲಯದ ಅಧ್ಯಕ್ಷ ಬಾಬು ರಾಜ್ ವಿ.ವಿ. ಭಾಗವಹಿಸಿ ಶುಭನುಡಿದರು. ವೇದಿಕೆಯಲ್ಲಿ ಗ್ಯಾರೇಜ್ ಮಾಲಕ ಮಂಜುನಾಥ ರವರ ತಾಯಿ ಬೂದಮ್ಮ, ಬೆಳ್ತಂಗಡಿ ಗ್ಯಾರೇಜ್ ಮಾಲಕರ ಸಂಘದ ಕಾರ್ಯದರ್ಶಿ ಪುರಂದರ ಹೆಗ್ಡೆ, ಸನ್ಮಾನಿತರಾದ ಗೋಪಾಲಕೃಷ್ಣ, ಸಂಜೀವ ಗೌಡ ಉಪಸ್ಥಿತರಿದ್ದರು.

ಆರ್. ಜೆ. ಸೋನ್ಸ್ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗ್ಯಾರೇಜ್ ಮಾಲಕರ ಸಂಘದ ಸಂಚಾಲಕಬಾಲಕೃಷ್ಣ ಶೆಟ್ಟಿ ಹಾಗೂ ಗ್ಯಾರೇಜ್ ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ಸಹಕರಿಸಿದರು. ಗ್ಯಾರೇಜ್ ಮಾಲಕ ಮಂಜುನಾಥ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here