ಗುರುವಾಯನಕೆರೆ: ರಾಷ್ಟ್ರ ಮಟ್ಟದಲ್ಲಿ ನಡೆಯುವ ಅತ್ಯಂತ ಕಠಿಣ ಪರೀಕ್ಷೆಯೆನಿಸಿಕೊಂಡ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯ ಫೇಸ್ ಒನ್ ಪರೀಕ್ಷೆಯಲ್ಲಿ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹೊಸ ದಾಖಲೆ ನಿರ್ಮಿಸಿದ್ದಾರೆ. ಎನ್.ಡಿ.ಎ ಪರೀಕ್ಷೆ ಬರೆದ ಸಮ್ಯಕ್ ವಿಜಯ್, ಸ್ವಸ್ತಿಕ್ ಎಂ. ಜೈನ್, ಅಕ್ಷಯ್ ಎ.,ಯತಿನ್ ಬಿ.ಎಸ್., ಪ್ರಜ್ವಲ್ ಗೌಡ ಆರ್. ಎಸ್., ಶಶಾಂಕ್ ಗೌಡ ಆರ್.,ಅಭಿಷೇಕ್ ಅಡಪ್ಪ,
ಲಕ್ಷ ಮಹಾಜನ್, ತೇಜಲ್ ವಿ., ಅಮೃತ ನಾಯಕ್, ಶಮಿತ್ ಗೌಡ ಎ.ಎಸ್., ಅವರು ಎನ್. ಡಿ. ಎ. ಎಕ್ಸಾಂ ಫೇಸ್ ಒನ್ ನ್ನು ಯಶಸ್ವಿಯಾಗಿ ಬರೆದು, ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.
ನಿರಂತರವಾಗಿ ದೊಡ್ಡ ಮೊತ್ತದ ಸ್ಟೈಫಂಡ್ ಸಿಗುವ, ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸುವ,ರಾಷ್ಟ್ರ ಮಟ್ಟದಲ್ಲಿ ಕೇವಲ 400 ಸೀಟ್ ಗಳಿರುವ ಈ ಪರೀಕ್ಷೆಗೆ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಸ್ಪರ್ಧಿಸುತ್ತಾರೆ. ಲಕ್ಷಾಂತರ ವಿದ್ಯಾರ್ಥಿಗಳ ಕನಸಿನ ಆಯ್ಕೆ ಎನ್. ಡಿ. ಎ ಆಗಿರುತ್ತದೆ. ಅತ್ಯುತ್ತಮ ಟೀಚಿಂಗ್ – ಕೋಚಿಂಗ್ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಮಾತ್ರ ಎನ್. ಡಿ. ಎ. ಯನ್ನು ಕ್ಲಿಯರ್ ಮಾಡಲು ಸಾಧ್ಯ. ಎಕ್ಸೆಲ್ ಕಾಲೇಜಿನ 11 ಜನ ವಿದ್ಯಾರ್ಥಿಗಳು ಒಂದೇ ಬಾರಿಗೆ ಕ್ಲಿಯರ್ ಮಾಡಿರುವುದು ನಿಜಕ್ಕೂ ಅಲ್ಲಿನ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈ ಗನ್ನಡಿಯಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಎಕ್ಸೆಲ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು, ಸಂಯೋಜಕ ಜೋಸ್ಟಮ್ ಎ.ಟಿ. ಅವರು ಅಭಿನಂದನೆ ಸಲ್ಲಿಸಿದ್ದಾರೆ.