ಬೆಳ್ತಂಗಡಿ: ಸ್ವಾಮಿ ಪ್ರಸಾದ್ ಅಸೋಸಿಯೇಟ್ಸ್ ಕಾಶಿಬೆಟ್ಟುವಿನಲ್ಲಿ ಆಯುಧ ಪೂಜೆ ಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಬಂದಂತಹ ಅಥಿತಿಗಳನ್ನು ಸಂಸ್ಥೆಯ ಮಾಲಕ ಕೆ.ಎಂ. ನಾಗೇಶ್ ಕುಮಾರ್ ಗೌಡ ಹಾಗೂ ಸುಧಾ ನಾಗೇಶ್ ಕುಮಾರ್ ಸ್ವಾಗತಿಸಿದರು. ಟಿ. ಮಾಯಿಲಪ್ಪ ಗೌಡ, ಬೆಸ್ಟ್ ಪೌಂಡೆಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಪಿ.ಟಿ. ಸಭಾಸ್ಟಿಯನ್, ಉಜಿರೆ ಸಹಕಾರಿ ಸಂಘದ ಸದಸ್ಯರಾದ ರಜತ್ ಗೌಡ, ರೋಯ್ ಪುದುವೆಟ್ಟು, ಗಿರೀಶ್ ಕುಮಾರ್, ಶ್ರೀರಾಮ್ ಕಲಂದರ್ ಕೊಕ್ಕಡ ಹಾಗೂ ಹಲವಾರು ಮುಖಂಡರು ಭಾಗವಹಿಸಿದ್ದರು.