ಅ.2: ರಾಜಧಾನಿ ದೆಹಲಿಯಲ್ಲಿ ಯಕ್ಷಧ್ರುವ ಪಟ್ಲ ದಶಮ ಸಂಭ್ರಮ-ನೂರಕ್ಕೂ ಮಿಕ್ಕಿ ಮಹಿಳೆಯರಿಂದ ನಾಡಗೀತೆ ಹಾಗೂ ಕೀಚಕ ವಧೆ ಯಕ್ಷಗಾನ ಪ್ರದರ್ಶನ

0

ನವದೆಹಲಿ: ಕರಾವಳಿಯ ಗಂಡುಕಲೆಯೆಂದೇ ಪ್ರಸಿದ್ಧವಾದ ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಅಶಕ್ತ ಕಲಾವಿದರ ಬದುಕಿನ ಭರವಸೆಯ ಬೆಳಕನ್ನು ಮೂಡಿಸುವ ನಿಟ್ಟಿನಲ್ಲಿ 10 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಪಟ್ಲ ಸತೀಶ್ ಶೆಟ್ಟಿಯವರು ಸ್ಥಾಪಿಸಿದ ಸಂಸ್ಥೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ಗೆ ದಶಮ ಸಂಭ್ರಮ. ಈ ದಶಮ ಸಂಭ್ರಮವನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಯಕ್ಷಧ್ರುವ ದೆಹಲಿ ಘಟಕ, ಬಂಟ್ಸ್ ಕಲ್ಬರಲ್ ಅಸೋಸಿಯೇಶನ್, ನವದೆಹಲಿ ಸಹಯೋಗದಲ್ಲಿ ಅಕ್ಟೋಬರ್ 2ರಂದು ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ದಶಮ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮವನ್ನು ನವದೆಹಲಿ ಕ್ಷೇತ್ರದ ಸಂಸದೆ ಬಾನ್ಸುರಿ ಸ್ವರಾಜ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಭಾಗೀರಥಿ ಮುರುಳ್ಯ-ಮಾನ್ಯ ಶಾಸಕರು, ಸುಳ್ಯ-ಕ್ಷೇತ್ರ, ಎಚ್. ರಾಜೇಶ್ ಪ್ರಸಾದ್ ಐಎಎಸ್, ಪ್ರಿನ್ಸಿಪಲ್ ಸೆಕ್ರೆಟರಿ. ಜಮ್ಮು ಮತ್ತು ಕಾಶ್ಮೀರ ಸರ್ಕಾರ, ಡಾ. ಕನ್ಯಾನ ಸದಾಶಿವ ಶೆಟ್ಟಿ ಸಿಎಂಡಿ, ಹೇರಂಭ ಇಂಡಸ್ಟ್ರೀಸ್ ಲಿ. ಮತ್ತು ಕೆಮಿನೊ ಫಾರ್ಮ್ ಲಿ. ಮುಂಬೈ, ಶಶಿಧರ ಶೆಟ್ಟಿ ಬರೋಡಾ, ಉದ್ಯಮಿಗಳು, ನಿರ್ಮಾಪಕರು, ಸು ಫ್ರಮ್ ಸೋ ಚಲನಚಿತ್ರ, ಜಯರಾಮ್ ಬನಾನ್, ಉದ್ಯಮಿಗಳು ಮತ್ತು ಸಮಾಜ ಸೇವಕರು, ವಿವೇಕ್ ಆಗರ್‌ವಾಲ್, ವ್ಯವಸ್ಥಾಪಕ ನಿರ್ದೇಶಕರು, ಕ್ಯಾಪಿಟಲ್ ವೆಂಚರ್ಸ್ ಪ್ರೈವೇಟ್ ಲಿ.. ದೀಪ್ತಿ ಶರ್ಮಾ, ನಿರ್ದೇಶಕರು, ಸೆಂಚುರಿ ಕ್ರೇನ್ ಇಂಜಿನಿಯರ್‌ಸ್ ಪ್ರೈವೇಟ್ ಲಿ.. ಹಾಗೂ ಗೌರವ ಉಪಸ್ಥಿತರಾಗಿ ಸುರೇಶ್ ಶೆಟ್ಟಿ, ಅಧ್ಯಕ್ಷರು, ಬಂಟ್ಸ್ ಕಲ್ವರಲ್ ಅಸೋಸಿಯೇಶನ್, ನವದೆಹಲಿ, ಟಿ. ಶಿವಪ್ರಸಾದ್ ಶೆಟ್ಟಿ, ಗೌರವ ಅಧ್ಯಕ್ಷರು, ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್, ದೆಹಲಿ ಘಟಕ. ಯಕಧುವ ಪಟ್ಲ ಫೌಂಡೇಷನ್ ಟ್ರಸ್, ಮಂಗಳೂರಿನ ಕಾರ್ಯದರ್ಶಿ ಪುರುಷೋತಮ ಕೆ. ಭಂಡಾರಿ, ಮೈಕಾಂಚೆ ಚಾರ್ಟರ್ಡ್ ಅಕೌಂಟೆಂಟ್ ಸುದೇಶ್ ಕುಮಾರ್ ರೈ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ. ನಾಗರಾಜ ಮತ್ತು ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ರಾಧಾಕೃಷ್ಣ ನಾವಡರಿಗೆ ಸನ್ಮಾನ: ಯಕ್ಷಲೋಕದಲ್ಲಿ ‘ರಂಗಸ್ಥಳದ ರಾಜ’ ಎಂದೇ ಪ್ರಸಿದ್ಧವಾಗಿರುವ ಹಿರಿಯ ಕಲಾವಿದ ರಾಧಾಕೃಷ್ಣ ನಾವಡರಿಗೆ ಪಟ್ಲ ಫೌಂಡೇಶನ್ ದೆಹಲಿ ಘಟಕದ ವತಿಯಿಂದ ಸನ್ಮಾನಿತರಾಗಲಿದ್ದಾರೆ ಹಾಗೂ ಯಕ್ಷಲೋಕದ ಪ್ರಸಿದ್ಧ ಕಲಾವಿದರಿಂದ ‘ಕೀಚಕ ವಧೆ’ ಯಕ್ಷಗಾನ ಕಥಾ ಪ್ರಸಂಗ ನಡೆಯಲಿದೆ. ಕಾರ್ಯಕ್ರಮದ ಪ್ರಾರಂಭ ಕುವೆಂಪು ವಿರಚಿತ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ ನೂರು ತುಂಬಿದ್ದ ಸಂದರ್ಭದಲ್ಲಿ ನೂರಕ್ಕೂ ಮಿಕ್ಕಿ ದೆಹಲಿಯ ಸ್ಥಳೀಯ ಮಹಿಳೆಯರಿಂದ ನಾಡಗೀತೆ ವಿಶೇಷವಾಗಲಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್, ದೆಹಲಿ ಘಟಕದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here