ಧರ್ಮಸ್ಥಳ: ಗ್ರಾಮ ಪಂಚಾಯಿತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ದಿನೇಶ್ ಎಂ. ಅವರು ಸೆ. 30ರಂದು ಸೇವಾ ನಿವೃತ್ತಿ ಹೊಂದಿದರು. ಇವರು ಊರಿನ ಶಾಲೆಯಲ್ಲಿ ಗೌರವ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. 1990ರಲ್ಲಿ ಮುಂದುವರಿಕಾ ಧರ್ಮಸ್ಥಳ ಶಿಕ್ಷಣ ಕೇಂದ್ರದ ಪ್ರೇರಕರಾಗಿ ಕೆಲಸವನ್ನು ಮಾಡಿದ್ದು 1994ರಿಂದ ಧರ್ಮಸ್ಥಳ ಗ್ರಾಮ್ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್, ಕ್ಲರ್ಕ್ ಕೆಲಸವನ್ನು ನಿರ್ವಹಿಸಿ 2012 ಮುಂಬಡ್ತಿ ಹೊಂದಿ ಗ್ರಾಮ ಪಂಚಾಯತಿ ಲೆಕ್ಕ ಸಹಾಯಕರಾಗಿ, ಹಾಗೂ 2020 ಗ್ರೇಡ್ ಒನ್ ಕಾರ್ಯದರ್ಶಿಯಾಗಿ ಪುತ್ತೂರು ತಾಲೂಕಿನ ಕಬಕ ಹಾಗೂ ಉಪ್ಪಿನಂಗಡಿಯಲ್ಲಿ ಸೇವೆ ಸಲ್ಲಿಸಿದರು.
2023 ರಿಂದ ಧರ್ಮಸ್ಥಳ ಗ್ರೇಡ್ ಒನ್ ಕಾರ್ಯದರ್ಶಿಯಾಗಿ, 2024ರಿಂದ ಧರ್ಮಸ್ಥಳ, ಹಾಗೂ ಶಿಶಿಲ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 2023ರಿಂದ ಪ್ರಸಿದ್ಧಿ ಪಡೆದಿರುವ ಶಿಶಿಲೇಶ್ವರ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದರು.
ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಮಜಲಿಮಾರು ದೇವಣ್ಣ ಗೌಡ ಮತ್ತು ತೇಜಮ್ಮ ಅವರ ಪುತ್ರರಾಗಿದ್ದು, ಪ್ರಗತಿಪರ ಕೃಷಿಕರು ಕೂಡ ಆಗಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸ ನಿರ್ವಹಿಸಿದ್ದು, ಶ್ರೀ ಮಂಜುನಾಥೇಶ್ವರ ಕಾಲೇಜುನಲ್ಲಿ ಪದವಿಯನ್ನು ಪಡೆದಿರುತ್ತಾರೆ. ಇವರು ಯಕ್ಷಗಾನ ಹಾಗೂ ನಾಟಕದಲ್ಲಿ ಹವ್ಯಾಸವನ್ನು ಹೊಂದಿದ್ದು ಹಾಸ್ಯ ಕಲಾವಿದರಾಗಿದ್ದಾರೆ.